ಬುಧವಾರ, ಫೆಬ್ರವರಿ 4, 2015

ಪ್ರಣತಿ


ಹೊಳೆಯ ಮಣ್ಣನು ತಂದು
ತುಳಿದು ಹದಮಾಡಿ ಹಿಡಿದು 
ಬೆಳೆದನು ಕಂಬಾರ  ಪ್ರಣತಿ ಹಲವು

ತಳಿರು ತೋರಣವ ಹಚ್ಚಿ
ಬಳಿದು ಹೊಸ ಬಣ್ಣಗಳನು
ಬೆಳಗಿಸಿದರು  ದೀಪ ಹರಿಸಿ ಹೊನಲು

ಎಳೆದು ಹಾಕಿದರು ನಮ್ಮ 
ಕಳೆದ ಹಬ್ಬದ ಮರುದಿನ 
ಹಳೆಯ ಹೊರಗಿನ ಗೂಡಿನೊಳಗೆ   

ಎಳ್ಳ ಎಣ್ಣೆಯಲಿ ಮಿಂದು
ಹೊಳೆವುದೆನ್ನಯ ಮೊಗವು 
ಕಳೆಗುಂದಿದ ಹಲವು ನೆಂಟರೋಳಗೆ 

ಬೆಳಗಿ ಮನೆ ಮನದಂಗಳದಿ 
ಕಳಿತು ಮಳೆಯಲಿ ದಿನ ದಿನದಿ 
ಹಳ್ಳಕೊಳ್ಳದಲಿ ಹರಿದು ಸೇರಿ ಹೊಳೆಗೆ 

1 ಕಾಮೆಂಟ್‌:

  1. ಪ್ರಕೃತಿಯ ಮೂಲಕ ಕೃತಿಸಿದ ಸಾಮಗ್ರಿಗಳು ಯಾವುದೇ ತಂಟೆ ತಕರಾರಿಲ್ಲದೆ ಮತ್ತೆ ಪ್ರಕೃತಿಯನ್ನೇ ಸೇರಿ ಇನ್ನೊಮ್ಮೆ ನಮ್ಮ ಅನುಕೂಲಕ್ಕೆ ದೊರೆಯುತ್ತವೆ. ಅದು ಅವುಗಳ ನಿರ್ಭಾವುಕತೆ ಮತ್ತು ನಿಸ್ವಾರ್ಥತೆಯ ಸಂದೇಶ.
    ಕವನದ ಹೂರಣವೂ ಮನಸೆಳೆಯಿತು.

    ಪ್ರತ್ಯುತ್ತರಅಳಿಸಿ