ಹಸಿರ ಕಣ್ಣಲಿ ತುಂಬಿ
ಉಸಿರ ದೇಹದಿ ತುಂಬಿ ಬೇಸರ ತೋರಿಸದೆ ಒಳಗೊಳಗೇ
ಕಿತ್ತರು ಪತ್ರಂಬೆಗಳನು
ಚಿತ್ತದಲಿಲ್ಲ ನೋವುದೆಂದುಕತ್ತುಹಿಸುಕಿ ಕೊಲ್ಲುವರು ದಿನ
ಬೆತ್ತಲೆ ಮಾಡುತ ಬೀದಿಯೊಳಗೆ
ಅರೆಬೆತ್ತಲಾದರೆ ಏನು
ಕರೆದು ಎದೆಹಾಲು ನೀಡುವಳಂತೆ
ಗಾರೆ ಊರ ತುಂಬಿದರೆ ಏನು
ತರುವೆ ಹಸಿರು ಪ್ರಕೃತಿಯೊಳಗೆ
ಹಣ್ಣೆಲೆ ಉದಿರಿಸಿ ಶಶಿರದಲ್ಲಿ
ಬಣ್ಣದ ಚಿಗುರೆಲೆಗಳ ಬಿಡುವೆ
ಸಣ್ಣ ವರವಿದೆ ಕಡಿಯದಿರಿ
ಹಣ್ಣು ಹೂ ಕೊಡುವೆ ಭುವಿಯೊಳಗೆ
ಅರಿತು ಉಳಿಸಿ ನವ ಪೀಳಿಗೆಗೆ
ಪ್ರಕೃತಿಯ ಮಾತೃ ಹೃದಯವನ್ನು ಸವಿಸ್ತಾರವಾಗಿ ವಿವರಿಸಿದ್ದೀರ.
ಪ್ರತ್ಯುತ್ತರಅಳಿಸಿಒಂದು ಸಾಲನಾದರೂ ಮತ್ತೊಮ್ಮೆ ಇಲ್ಲಿ ಹಾಕೋಣವೆಂದರೆ ಇಡೀ ಪದ್ಯವೇ ಮರು ಮುದ್ರಿಸಿದ್ರೂ ಕಡಿಮೆಯೇ ಹಾಗಿದೆ.
ಶಬಾಷ್...
ನಿಮ್ಮ ಪ್ರೋತ್ಸಾಹ ಹೊಸ ಹೊಸ ಯೋಚನೆ
ಪ್ರತ್ಯುತ್ತರಅಳಿಸಿಕವನ ಉದಯಕ್ಕೆ ಕಾರಣ :)