ಹಸಿರ ಸೀರೆಯನುಟ್ಟವಳ
ಸರೆಗನೆಳೆಯಲು ಹೋದೆ
ಅರೆಕ್ಷಣದಿ ಹಿಡಿದು ನಕ್ಕಳು
ಬರಸೆಳೆದು ಮುತ್ತಿಕ್ಕುತ
ಎರೆಡು ಕೆನ್ನೆಯ ಹಿಂಡಿ
ಹಿರಿ ಹಿರಿ ಹೆಗ್ಗುತ ಎತ್ತಿ
ತೂರಿ ಹಿಡಿದು ಅಡಿಸುವಳು
ಕರದಲ್ಲಿ ಅಪ್ಪಿ ಮುತ್ತಿಕ್ಕುತ
ಅಕ್ಕರದಿ ಕರೆದು ಕೂಡಿಸಿ
ಚಕ್ಕುಲಿ ಗಿಲಗಂಚಿಯ ಕೊಟ್ಟು
ಸಕ್ಕರೆಯ ಸಿಹಿ ತಿನಿಸುವಳು
ಪಕ್ಕದಲಿ ಕುಳಿತು ಮುತ್ತಿಕ್ಕುತ
ಅಮ್ಮನ ಪ್ರೀತಿಯಲಿ ಮುಳುಗಿ
ಸುಮ್ಮನೆ ಕುಳಿತು ಬಿಟ್ಟೆ
ಹೆಮ್ಮಯಿಂದ ಹರಸಿ ಕಳುಹಿದಳು
ಹುಣ್ಣಿಮೆಯಲಿ ತಪ್ಪದೆ ಬಾರೆನ್ನುತ
ವಿಭಿನ್ನ ಹೂರಣ ಮತ್ತು ಅತ್ಯುತ್ತಮ ಸಾದೃಶ ಕವನ.
ಪ್ರತ್ಯುತ್ತರಅಳಿಸಿ