ಗುರುವಾರ, ಆಗಸ್ಟ್ 7, 2014

ಸಂಜೆಯಲಿ

ಅಂದದ ಮಳೆಯ ಬರುತಿದೆ 
ಚಂದದ ಒಂದು ಸಂಜೆಯಲಿ
ಮಿಂಚು ಗುಡುಗು ಸಿಡಿಲು 
ಬಂತು ರಾಜನಂತೆ ಗರ್ಜಿಸುತಲಿ

ಬಂಗಾರದ ಬೆಳಕು ಚಲ್ಲಿ 
ಹೊಂಬಣ್ಣ ತುಂಬಿದೆ ಇರುಳಲ್ಲಿ  
ಮಿಂಚು ಚಿತ್ತಾರ ಮೂಡಿಸಿ 
ಹೊಂಚು ಹಾಕಿದೆ ಆಗಸದಲ್ಲಿ  

ತೆಂಗಿನ ಗರಿಗಳ ಕಲರವದಿ   
ತಂಗಾಳಿ ಇಂಪು ತುಂಬುತಲಿ 
ತುಂತುರು ಮುತ್ತಿನ ಮಳೆಹನಿಯ 
ತಂಪು ಮುತ್ತಿಕ್ಕುತಿದೆ ಭುವಿಯಲ್ಲಿ 

ನಲ್ಲೆಯ ಸನಿಹ ಬಯಸುತಿದೆ 
ಈ ಮೋಹ ತುಂಬಿದ  ಇರುಳಲ್ಲಿ
ಕೊರೆವೆ ಹೊಸ ಪ್ರೀತಿಯ ಕವನ 
ಅವಳಿಗಾಗಿ ನನ್ನ ಹೃದಯದಲ್ಲಿ 

1 ಕಾಮೆಂಟ್‌:

  1. ರಮಣೀಯ ಸಂಜೆ ಮತ್ತು ಹಿತವಾದ ಮಳೆಯ ಚಿತ್ರಣವು ಕವನದಲ್ಲಿ ಸುಂದರವಾಗಿ ಮೂಡಿಬಂದಿದೆ.
    ಭಾಷೆಯ ಸುಲಲಿತ ಬಳಕೆ ಮನಸೆಳೆಯುತ್ತಿದೆ.

    ಉಳಿದ ರಚನೆಗಳನ್ನೂ ವಿವರವಾಗಿ ಓದಿಕೊಳ್ಳುತ್ತೇನೆ. ಲಿಂಕ್ ಕೊಟ್ಟು ಉಪಕರಿಸಿದ್ದೀರಿ.

    ಪ್ರತ್ಯುತ್ತರಅಳಿಸಿ