ಹಂಗಿನರಮನೆ(ಸಿಟಿ) ಗಿಂತ
ಹಳ್ಳಿಯ ಗಿರಿ ಮನೆ ಸಾಕು
ಹೃದಯದ ಬಾಗಿಲು ತೆರೆದು
ಹೊರಗೆ ನೋಡುತಿರಬಹುದು
ಒಡೆಯ ನಿಲ್ಲದ ಮನೆಗಿಂತ
ಒಡಲು ತುಂಬಿದ ಪ್ರಕೃತಿ ಸಾಕು
ಓಡುವ ಜೀವನಕೆ ವಿರಾಮವಿಟ್ಟು
ಒಡನಾಡಿಗಳ ಜೊತೆ ನಲಿಯಬಹುದು
ಮುಚ್ಚಿದ ನಗರದ ಮನೆ ಬಾಗಿಲಿಗಿಂತ
ಮನೆಯ ಮುಂದೆ ತೆರೆದಬಾಗಿಲು ಬೇಕು
ಮುಖ ಮೇಲೆತ್ತಿ ತೆರೆದಬಾಹುಗಳಿಂದ
ಮುಗಿಲ ತಬ್ಬಿ ಮುದ್ದಾಡಬಹುದು
ಹುಲ್ಲು ಬೆಳೆಯದ ನಗರ ದಾರಿಗಿಂತ
ಹಸಿರು ತುಂಬಿದ ಕಾಲುದಾರಿ ಲೇಸು
ಹಿತವಾದ ಹಳ್ಳಿ ಪರಿಸರದಲಿ ಬೆರೆತು
ಹೊಸದಾಗಿ ಕನಸು ಕಾಣಬಹುದು
ಮರಳಿ ಮಣ್ಣಿಗೆ ಕಲ್ಪನೆ ಅಕ್ಷರ ಅಕ್ಷರಗಳಲ್ಲೂ ಒಡಮೂಡಿದೆ.
ಪ್ರತ್ಯುತ್ತರಅಳಿಸಿ