ಸೊಳ್ಳೆ ನೀ ಎಲ್ಲಿಅಂದರೆ ಅಲ್ಲೇ ..
ನೀ ಸೊಳ್ಳೆ ನಿನ್ನ ಸೂಜಿ ನಾ ಬಲ್ಲೆ !!
ಗುಯ್ ಗುಯ್ ಗುಟ್ಟಿ ಹಾರೋ ನೀನು
ಸುಯ್ ಸುಯ್ ರಾಗ ಹಾಡೋ ನೀನು
ತಟ್ಟಿಸಿ ಚಪ್ಪಾಳೆ ನೋಡಿ ನಗುವೇ ಏನೋ
ಕಾಟಕ್ಕೆ ಸೋತು ಹೋಗಿರುವೆ ನಾನು
ತೆರೆದ ನೀರಲಿ ಹುಟ್ಟಿ ಬರುವೆ ನೀನು
ವಾರದೊಳಗೆ ಮತ್ತೆ ಮೊಟ್ಟೆ ಇಡುವೆ
ಹರಡುವೆ ಡೆಂಗು ಚಿಕನ್ಗುನ್ಯ ಮಲೇರಿಯ
ಕರೆಯದೆ ಬರುವ ಮನೆಯ ಅತಿಥಿ ನೀನು
ಸೊಳ್ಳೆ ಬತ್ತಿ ಹಚ್ಚಿದೆ ನಾನು
ತಾಳಿಕೊಂಡು ಮತ್ತೆ ಬಂದೆ ನೀನು
ಕುಳಿತು ಕಚ್ಚಿದೆ ಕೈ ಸಿಕ್ಕಿತೆ ಜೇನು
ಎಳೆದೆ ರಕ್ತ ಪೀಪಾಸು ನೀನು .. ಸೊಳ್ಳೆ
ಸೊಳ್ಳೆ ಪರೆದೆ ಕಟ್ಟಿದೆ ನಾನು
ಕಳ್ಳ ದಾರಿಯಲಿ ಒಳ ಬಂದೆ ನೀನು
ಆಲ್ ಔಟ್ ಹಚ್ಚಿ ಮಲಗಿದೆ ನಾನು
ಸೋಲ್ ಒಪ್ಪದೇ ಬಂದು ಕಚ್ಚಿದೆ ನೀನು
ಬ್ಯಾಟ್ ಹಿಡಿದು ಹೊಡೆದೆ ನಾನು
ಶಾಟ್ ಸೂಪರ್ ಎಂದು ಓಡಿದೆ ನೀನು
ಸಂಬ್ರಾಣಿ ಹೋಗೆ ಹಾಕಿದೆ ನಾನು
ಟಾಂ ಟಾಂ ಹೊಡೆದು ಹೋದೆ ನೀನು
.
ಕಟ್ಟ ಕಡೆಗೆ ಸೊಳ್ಳೆ ಕಾಗದ ಹಚ್ಚಿ ನಾನು
ಬಿಟ್ಟು ಓಡಿ ಹೋದೆ ಅ ವಾಸನೆಗೆ ನಾನೇ!
ಎಂಟೆದೆಯ ಗಟ್ಟಿ ಬಂಟನಾದರು ಏನು
ಪಂಟ ಸೊಳ್ಳ ನಿನಗೆ ಸೋತೆ ನಾನು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ