ನೀ ಇಲ್ಲದೆ ಕರಗಿರುವೆ
ನನ್ನ ಬಿಟ್ಟು ಅಲ್ಲಿ ನೀ ಹೇಗಿರುವೆ
ಕನಸಲ್ಲಿಯೂ ಕಾಡುತಿರುವೆ
ಎಲ್ಲಿ ಇದ್ದರೂ ನೀ ನನ್ನ ಜೊತೆ ಇರುವೆ ....
ಹಗಲಿರುಳು ವಿಮಾನದಲಿ ಕುಳಿತಾಗ
ಆ ಬಿಳೀ ಮೋಡದ ಮೇಲೆ ತೇಲಿದಾಗ
ಸುರ್ಯನ ಕೆಂಚ ಕಿರಣಗಳು ಸೋಕಿದಾಗ
ಭುವಿ ಅಂಚಿನಲಿ ನೀ ಕಂಡು ಮುಗುಳ್ನಕ್ಕಾಗ ....೧
ಆ ನೀಲಿ ಹಡಗಿನಲ್ಲಿ ಸಾಗಿದಾಗ
ಸಮುದ್ರದ ಅಲೆಗಳು ಬಂದು ತಾಗಿದಾಗ
ಬಿರುಗಾಳಿ ಧೂಳಿನ ಕವಚ ಎಬ್ಬಿಸಿದಾಗ
ಆಗಸದಿ ನಿನ್ನ ರೂಪ ಮೂಡಿ ಸರಿದಾಗ... ೨
ಸ್ವರ್ಣ ಸೇತುವೆ ಮೇಲೆ ನೆಡೆದಾಗ
ಪ್ರೆಮಿಗಳು ಮೈ ಮರೆತು ವಿಹರಿಸುವಾಗ
ಆ ಕೋರೆಯಿಸುವ ತಂಗಾಲಿ ಬೀಸಿದಾಗ
ದಪ್ಪನೆಯ ಹೊದ್ದ ಶಾಲಿನಲಿ ನಿನ್ನ ಕಂಡಾಗ...೩
ಕಾನನದ ಕಾಲ್ನಡಿಗೆಲಿ ಹೋಗುವಾಗ
ದಟ್ಟ ಮಂಜು ನನ್ನನು ಆವರಿಸಿದಾಗ
ಕಾಣದಾ ಕೈಯೊಂದು ಬಿಗಿದಪ್ಪಿಕೊಂಡಾಗ
ಮುತ್ತಿಕ್ಕಿ ನೀ ಪ್ರೀತಿ ಸುರಿಸಿದಂತೆ ಭಾಸವಾದಗ ೪
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ