ಬುಧವಾರ, ಸೆಪ್ಟೆಂಬರ್ 15, 2010

ನನ್ನನ್ನೇ ನೋಡುತಿರು

ಬಾ ಬೇಗ ಬಾ...
ಬಾ ಸನಿಹ ಬಾ...
ಮುಗಿಸಿ ಬೇಗ ಮನೆ ಕೆಲಸ
ಆರಿಸಿ ನಡು ಮನೆ ದೀಪ
ಕೇಸರಿ ಹಾಲು ತರುತಾ, ಬಾ
ಮೆಲ್ಲನೆ ಹೆಜ್ಜೇ ಇಡುತ

ಮಧು ಮಂಚದ ಹಾಸಿಗೆಗೆ
ಚಿತ್ತಾರದ ದಿಂಬು ಹೊದಿಕೆ
ವತ್ತಾಗಿ ಜೋಡಿಸಿರುವೆ
ಮಲ್ಲಿಗೇ ಗುಲಾಬಿ ಜೊತೆಗೆ

ಹೂ ಹೂವಿನೊಳಗಿಂದ
ಹಕ್ಕಿತಂದ ಜೇನಿಂದ
ಅದ್ದಿ ತೆಗೆದ ಹಣ್ಣುಗಳಾ
ಮುದ್ದು ಮಾಡುತ ಸವಿವ

ಗೆಜ್ಜೆ ಬಳೆ ಘಲ್ಲೆನಲು
ಝಲ್ ಎಂದಿತು ಎದೆಯು
ನನಸಾಗುತಿದೆ ಕನಸು
ಕಾಯುತಿದೆ ಮನಸು

ಬಾಗಿಲನ್ನು ಸರಸುತ್ತಾ
ನಾಚಿ ನೆಲ ಕೆರೆಯುತ್ತಾ
ಮೋಹ ತುಂಬಿದ ಕಣ್ಣು
ನನ್ನ ಮೇಲೆ ಹರಸುತ್ತಾ

ನನ್ನನ್ನೇ ನೋಡುತಿರು..
ನಕ್ಕು ದೂರ ಓಡದಿರು.
ಉಕ್ಕಿ ಬರುವಾ ಪ್ರೀತಿ..
ತೆಕ್ಕೆಯಲ್ಲಿ ಸೆರೆಹಿಡಿವೆ ..

ಮಂದಗಮನೆ ನೀನು
ಅಂದದಿ ಬಂದು ಸೇರು
ಚಂದಿರನ ತೋರುತಲಿ
ಚಂದದಿ ಮಲಗಿಸುವೆ

1 ಕಾಮೆಂಟ್‌:

  1. ಒಂದು ಸರಸದ ಸುಸಮಯದ ಸಾದೃಶ್ಯತೆ ಕಟ್ಟಿಕೊಟ್ಟ ಕವನ.
    ಅಂದಹಾಗೆ, ತಮಗೆ ಮದುವೆ ಆಗಿದೆಯೋ? ಅಥವ ಇನ್ನೂ ಕಂಕಣ ಭಾಗ್ಯ ಕೂಡಿಬರಬೇಕೋ?

    ಪ್ರತ್ಯುತ್ತರಅಳಿಸಿ