ಶುಕ್ರವಾರ, ಜೂನ್ 4, 2010

ನನ್ನ ನಲ್ಲೇ

ನೀನೆ ನನ್ನ ನಲ್ಲೇ ಏನು
ಹುಡುಕಿ ಹುಡುಕಿ ಸೋತೆ ನಾನು
ನೀನು ಇಲ್ಲೇ ಇರುವೆ ಏನು
ಹಾಗೆ ಬಂದು ಸೇರು ನನ್ನನು

ಶೃಂಗಾರ ವಿಲ್ಲದಾ ಚಲುವು
ತೋರುಸುವೆ ಅದೆಂಥ ಒಲವು
ಕನಸುಗಳು ಬೀಳುತಿವೆ ಹಲವು
ನೆನೆದು ನೆನೆದು ನಿನ್ನನು

ಮೈಸೂರು ಮಲ್ಲಿಗೆ ಮುಡಿದು
ಬಳೆಗಳ ದನಿಯನ್ನು ಹಿಡಿದು
ಹಸಿರ ಸೀರೆ ಉಟ್ಟು ನೆಡೆದು
ನೋಟದಿ ಸೆಳೆವೆ ಎನ್ನನ್ನು

ಮಂದಹಾಸ ಮುಗುಳ ನಗೆಯು
ಹೊಮ್ಮುವುದು ಜೇನಿನ ಧ್ವನಿಯು
ಮೋಹ ತುಂಬಿದ ನಿನ್ನ ಮನವು
ಗಟ್ಟಿ ಭಂದಿಸಿದೆ ನನ್ನನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ