***ಮಳೆ ನಿಲ್ಲುವ ಮುನ್ನ***
ಬರಿಯಬೇಕು ಕವನ
ಮಳೆ ನಿಲ್ಲುವ ಮುನ್ನ
ಗುಡುಗು ಸಿಡಿಲು
ಹೊಡೆಯುವ ಮುನ್ನ
ಆಣೇಕಲ್ಲು ಕರಗಿ
ನೀರಾಗುವ ಮುನ್ನ
ಆಗಸದಿ ಕೋಲ್ಮಿಂಚು
ಸುಳಿದು ಜಾರುವ ಮುನ್ನ
ಕರಿಮೋಡದ ಮುಂದೆ
ಕಮನ ಬಿಲ್ಲು ಮಾಸುವ ಮುನ್ನ
ಚಲಿಸುವ ಮೋಡ ತಂಗಾಳಿ
ಜೋತೆ ಸಾಗುವ ಮುನ್ನ
ಏಲೆ ತುದಿಯಿಂದ ಹನಿಯು
ಭುವಿಗೆ ಬೀಳುವ ಮುನ್ನ
ರಂಬೆ ಕೂಂಬೆಗಳು
ಮುರಿದು ಹೋಗುವ ಮುನ್ನ
ಹಕ್ಕಿ ಪಕ್ಷಿಗಳು
ಗೆರಿ ಕೆದರಿ ಹಾರುವ ಮುನ್ನ
ವಿದ್ಯುತ್ ದೀಪ
ಕಡಿದು ಆರುವ ಮುನ್ನ
ಮಕ್ಕಳು ಕಾಗದದ ಹಡಗು
ನೀರಲ್ಲಿ ತೇಲಿ ಬಿಡುವ ಮುನ್ನ
ನನ್ನ ನಲ್ಲೆ ಮಳೆಯಲ್ಲಿ ಮಿಂದು
ಒಮ್ಮೆ ಓರೆ ನೋಟದಿ ನೋಡುವ ಮುನ್ನ
hey its very impressive prabhanjan,it can touch anybody's heart even for person who doesnt hav feelings for kavana.
ಪ್ರತ್ಯುತ್ತರಅಳಿಸಿsimple n neat!
ಪ್ರತ್ಯುತ್ತರಅಳಿಸಿits simply superb.....
ಪ್ರತ್ಯುತ್ತರಅಳಿಸಿ