ಸೋಮವಾರ, ಮಾರ್ಚ್ 29, 2010

ಅಕ್ಕ

ಅಕ್ಕ ನಿನ್ನ ಗಂಡ ಆಗೋರು ತುಂಬಾ ಕಪ್ಪು ಕಣೇ
ಪಕ್ಕದ ಮನೆಯ ಹುಡುಗನಿಗಿಂತ ಬೆಳ್ಳಗೆ ಇಲ್ಲವೇನೇ

ಕೆಕ್ಕರಿಸಿ ನಿನ್ನ ನೋಡೋ ನೋಟ ಸೊಟ್ಟ ಇಲ್ಲವೇನೇ
ಅಕ್ಕರೆಯಿಂದ ನೋಡೋವಾಗ ಕಾಣೋದು ಸೋಟ್ಟನೇ ಕಣೇ

ನಕ್ಕರೆ ಕಾಣೋ ಕೋರೆ ಹಲ್ಲು ಎಸ್ಟು ಅಂದಾನೇ
ದಂತ ವೈದ್ಯರ ಹತ್ರ ಹೊಗಿ ಸರಿ ಮಾಡಿಸ್ತೇನೆ

ಕೂಗಿ ಕರೆದರೂ ಕೇಳಿಸದಾಕಿವಿ ಸೂಕ್ಷ್ಮ ಅಲ್ವೇನೇ
ಕೆಟ್ಟ ವಿಷಯ ಕಿವಿಗೆ ಬೀಳದೇ ಇರೊದು ಒಳ್ಳೇದೇ ಕಣೇ

ಹರಕು ಮುರುಕು ಕೂದಲು ಅವನ ಬೈತಲು ನಾ ಕಾಣೇ
ತಲೆ ಸ್ನಾನ ಮಾಡ್ಸಿ ಬಾಚಿದರೆ ಸ್ಪುರದ್ರೂಪಿ ಆಗ್ತಾನೇ

ಸೊಕ್ಕು ತುಂಬಾ ಜಾಸ್ತಿ ಅವನು ಈಗಲೇ ತೋರಿಸ್ತಾನೆ
ರೊಕ್ಕ ಇರೋ ಹುಡುಗರಿಗೆ ಅದು ಸಹಜ ಅಲ್ಲವೇನೇ

ಸಿಕ್ಕ ಸಿಕ್ಕ ಹುಡಿಗಿಯರ ಹಿಂದೆ ಓಡಿ ಹೋಗ್ತಾನೇ
ಕೊಕ್ಕೆ ಹಾಕಿ ಹಿಡಿದು ತರಲು ಬೇಗ ಮದುವೆ ಅಗ್ತೀನೇ

ಚಿಕ್ಕ ಚಿಕ್ಕ ವಿಷಯಕ್ಕೆಲ್ಲಾ ತುಂಬಾ ತರಲೆ ಮಾಡ್ತಾನೇ
ಚೊಕ್ಕವಾಗಿ ಜೀವನ ನೆಡೆಸೊರು ಸ್ವಲ್ಪ ಹಗೇನೇ ಕಣೇ

ಕೋಪ ಮಡ್ಕೊಂಡು ಕೂಡೋ ನಿನ್ನ ಹೇಗೇ ಸಾಕ್ತಾನೇ
ಸಕ್ಕರೆಯಂತೆ ಮುದ್ದಿಸಿ ನನ್ನ ಕರಗಿಸಿ ಬಿಡುವನೇ

ಅಕ್ಕ ಏನೇ ಹೇಳು ಅವನು ನಿನಗೆ ಸರಿ ಹೊಂದೋದಿಲ್ಲವೇ
ಪಕ್ಕ ಅವನ್ನೇ ಮದುವೆ ಅಗಿ ನಾನು ಸುಖವಾಗಿ ಇರ್ತ್ತೇನೇ

ಅಕ್ಕ ನನ್ನ ಅವನ ಜೋಡಿ ಚನ್ನಾಗಿ ಇರೋದಿಲ್ವೇನೆ
ಬಚ್ಚಿಟ್ಟ ನಿನ್ನ ಮನಸಿನ ಆಸೆ ಮುಂಚೆನೆ ಗೊತ್ಹಿತ್ತು ಕಣೆ!

1 ಕಾಮೆಂಟ್‌:

  1. ತರಳೆ ರನ್ನೇ ಕಪ್ಪು ಮೈಯ್ಯವನೆದರ ಚೆಲುವನೇ?
    ಕರಿಯ ಜತೆಯ ಜೋಗಿಗಿಂತ ಉತ್ತಮನಲ್ಲವೇನೆ?
    .....
    .....
    .....

    ಹರಿಹರನಿಗೆ ಸಾಮ್ಯವೇನೆ ಪೇಳೇ ರುಕ್ಮಿಣಿ
    ಪುರಂದರವಿಠ್ಠಲ ಸರ್ವೋತ್ತಮ ಕೇಳೇ ಭವಾನಿ...

    ದಾಸರ ಈ ಪದದ ಶೈಲಿಯಲ್ಲಿ ಚೆನ್ನಾಗಿ ಬರೆದಿದ್ದೀರಾ..

    ಪ್ರತ್ಯುತ್ತರಅಳಿಸಿ