ಹೊಗಳಲು ಬರೋದಿಲ್ಲ
ಜನ ಹೊಗಳದೆ ಇರೋದಿಲ್ಲ
ಅದರ ತುಸು ವರ್ಣನೆ ಈ ಕವನ ತುಂಬಾ
ಬೈಕುಗಳ ಸುಳಿಯೋದಿಲ್ಲ
ಬಸ್ಸು ರೈಲು ಬರೋದು ತಡ ಆಗೋಲ್ಲ
ಕಾರುಗಳದೆ ದರಬಾರು ರಸ್ತೆ ತುಂಬಾ
ಮಿಂಚು ಅತಿಯಾಗಿ ಮೂಡುವುದಿಲ್ಲ
ಅಂಚಿನಲ್ಲಿ ಗುಡುಗು ಸಿಡಿಲಿನ ಭಯವಿಲ್ಲ
ಸಿಂಚನ ದಂತೆ ಮಳೆ ಇಲ್ಲಿ ಭುವಿಯ ತುಂಬಾ
ಹೊಗೆ ಧೂಳು ಹರಡುವುದಿಲ್ಲ
ಹೆಚ್ಹು ಪ್ರಖರ ಬಿಸಿಲು ಬೀಳೋದಿಲ್ಲ
ಹಚ್ಹ ಹಸಿರು ಚಾಚಿದೆ ಈ ಊರ ತುಂಬಾ
ಇಡ್ಲಿ ದೋಸೆ ತಿನ್ನೋದಿಲ್ಲ
ಬ್ರೆಡ್ ಬೆಣ್ಣೆ ಜಾಮು ಬಿಡೋದಿಲ್ಲ
ಕೊಬ್ಬಿರದ ಹಾಲು ಹಣ್ಣುಗಳೇ ತಿಂಡಿ ತುಂಬಾ
ನೀರು ಜಾಸ್ತಿ ಕುಡಿಯೋದಿಲ್ಲ
ನೀರೆಯರು ಮೊಸರು ತಿನ್ನುವರಲ್ಲ
ಇಳಿಸುವರು ಅಲ್ಕೋಹಾಲು ಬಾಯಿ ತುಂಬಾ
ಬಟ್ಟೆ ಬೆಚ್ಹಗೆ ಹಾಕುವರಲ್ಲ
ಬೊಜ್ಜು ಕರಗಿಸಲು ಓಡುವರಲ್ಲ
ಬಿಸಿಲಿಗೆ ಮೈಯನ್ನು ಒಡ್ಡುವರು ಬೀಚು ತುಂಬಾ
ಮುಚ್ಚು ಮರೆ ಎಂಬೋದು ಇಲ್ಲ
ತುಚ್ಚವಾಗಿ ಯಾರನ್ನು ಕಾಣೋದಿಲ್ಲ
ಸ್ವೇಚ್ಛ ಪ್ರೀತಿ ತುಂಬಿದೆ ಎಲ್ಲರ ಮನದ ತುಂಬಾ
ಸಂಸಾರಕೆ ಬೇಗ ಬೀಳೊರಲ್ಲ
ಸರಸಕೆ ಜಾಗ ಇಂಥದ್ದೇ ಬೇಕಾಗಿಲ್ಲ
ಸಮಯವೇ ಅತಿಮುಖ್ಯ ಇವರಿಗೆ ಜೀವನ ತುಂಬಾ
ಭಾವನೆಗಳಿಗೆ ಬೆಲೆ ಇಲ್ಲ
ಬವಣೆಗಳಿಗೆ ಹೆದರೋದಿಲ್ಲ
ಬದುಕು ಸಾಗಿಸುವರು ಹೀಗೆ ಅಮೇರಿಕಾದ ತುಂಬಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ