ಮಂಗಳವಾರ, ಆಗಸ್ಟ್ 11, 2009

ಹುಡುಕಾಟ

ಹುಡುಕಾಟವೇ ಜೀವನ
ಹೊಡೆದಾಟದ ಮಧ್ಯ
ಗೆದ್ದವನ ಜೀವನ ಪಾವನ

ಏನು ಬೇಕು ಎಂದು ಗೊತ್ತಿಲ್ಲದೆ
ಇರುವುದ ಬಿಟ್ಟು ಇಲ್ಲದಿರುವುದನು
ಎಲ್ಲೆಲ್ಲಿಯೂ ಹುಡುಕುವುದೇ ಜೀವನ

ನಮಗಾಗಿ ಅಲ್ಲ ದಿದ್ದರು ..
ಅವರಿಗಾಗಿ ಎಲ್ಲವನು ಕೊಟ್ಟು..
ಹೊಸತೊಂದನ್ನು ಹುಡುಕುವುದೇ ಜೀವನ

ಅಳೀದು ಉಳಿದುದರ ಜೊತೆಗೆ
ಹೊಂದಿಕೊಂಡು ಮತ್ತೆ ಬದುಕಿಗಾಗಿ
ಕನಸು ಕಾಣುತ ಹುಡುಕದುವುದೇ ಜೀವನ!

ಈಗ ನೋವಿನ ಒಳ ಮನಸು ತೋರಿಸದೇ .
ನಗುವಿನ ಮುಖವಾಡ ಧರಿಸಿ
ಮಗದೊಂದು ಲೋಕವ ಹುಡುಕುವುದೇ ಜೀವನ

ಬಂದದೆಲ್ಲವ ಸ್ವೀಕರಿಸಿ ಅನುಭವಿಸಿ
ಇಂದು ಇನ್ನೊಬರಿಗೆ ಮಾದರಿಯಾಗಿ
ಮುಂದೆಯೂ ಹುಡುಕುತ ಸಾಗುವುದೇ ಜೀವನ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ