ಸೋಮವಾರ, ಜುಲೈ 20, 2009

ಪ್ರದೀಪ

ಬರದ ಊರಿಗೆ ಹೇಳದೆ ಹೋದೆ
ಮರೆಯದ ಪ್ರೀತಿಯ ಸುರಿಸಿ ನಮಗೆಲ್ಲ

ನೋವಲ್ಲು ಸುಖ ಪಡುವ ಪಾಠವ ಹೇಳಿ
ಅಗಲಿಕೆಯ ನೋವು ಕೊಟ್ಟು ಹೋದೆ ನಮಗೆಲ್ಲ

ಕನಸಿನ ಲೋಕದಲಿ ತೇಲಿದ ನೀನು
ಕನಸನ್ನು ಕೊಟ್ಟೆ ಹೋದೆಯಾ ನಮಗೆಲ್ಲ

ದಿನ ಹಗಲು ರಾತ್ರಿ ನೋಡದೇ ಹೇಗಿರಲಿ
ನಿನ್ನಯ ಹೆಸರನು ಈ ಚಾಟ್ ಬ್ರೌಸೆರ್ನಲ್ಲಿ

ಹರಟೆಯ ಹೊಡೆಯದೆ ಕಾಲನು ಎಳೆಯದೆ
ಹೇಗೆ ಕಳೆಯಲಿ ದಿನ ನಿನ್ನ ತುಂಟ ನಗುವಿಲ್ಲದೇ

ಓದಿ ವಿಮರ್ಶಿಸುವರಾರು ನನ್ನ ಕವನದ ಸಾಲು
"ಸೂಪರ್ ಮಗ" ಎಂದು ಇನ್ನಮೇಲೆ ಹೇಳುವರಾರು

ಜೀವದ ಗೆಳೆಯ ಎಂದೆಯಾ ನೀನು
ಜೀವ ಇರುವ ವರೆಗೆ ನಿನ್ನ ಮಾರೆಯಲಾರೆ ನಾನು

ಮುಕ್ತಿಯ ಕಾಣಲೆಂದು ಬಂದೆ ಈ ಭೂಮಿಗೆ ನೀನು
ಮುಕ್ತನದೆ ಇಂದು, ಚಿರ ಶಾಂತಿ ಸಿಗಲಿ ಎಂದು ಹಾರೈಸುವೆ ನಾನು .

ಪ್ರಖರವಾಗಲಿ ದೀಪ ಪ್ರದೀಪನ ಹೆಸರಲಿ
ಬೆಳಗುತಿರಲಿ ನಿನ್ನ ಹೆಸರು ಹಗಲು ಇರುಳಿನಲ್ಲಿ
: ಪ್ರೀತಿಯಿಂದ ಪ್ರಭಂಜನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ