ಮೋಹದ ಮನಸು ಕನಸು ಕಾಣುತ
ಭರದಿಂದ ಭೋರ್ಗರೆಯುತ ಧರೆಗೆ ಇಳಿದಂತೆ
ಮೊದಲ ಪ್ರೀತಿಯು ಆವರಿಸಿದಾಗ
ಮುತ್ತುಗಳ ರಾಸಿ ಬಿಡಿಬಿಡಿಯಾಗಿ ಮೈ ಮೇಲೆ ಬಿದ್ದಂತೆ
ನಲ್ಲ , ನಲ್ಲೆಯರು ಜೊತೆಗೂಡಿ ನಲಿವ ಹನಿಗಳಿಗೆ
ಕಿರಣಗಳ ಸೋಕಿ ಕಾಮನ ಬಿಲ್ಲು ಮೂಡಿದಂತೆ
ಹಸಿರ ಸೀರೆ ಉಟ್ಟು ಹಸಿರ ಬಳೆ ತೊಟ್ಟ
ಪ್ರಕೃತಿಗೆ ಸಿಂಚನ ಸುರಿಸಲು ಧುಮುಕಿ ಬಂದಂತೆ
ಆ ವಯ್ಯಾರದ ನಡುಗೆಗೆ ಮನಸೋತು
ಶಿವನೇ ಜಡೆ ಬಿಚ್ಚಿ ತಲೆಯ ಮೇಲೆ ಧರೆಸಿದಂತೆ
ಮಿಂದ ಮನಸುಗಳು ಧನ್ಯತೆ ಹೊಂದಲು
ಧರಣಿಗೆ ಬಂದ ಜಾನ್ಹವಿಯಾ ಬಳುಕಿನ ಆ ನೋಟ
ಸ್ವರ್ಗದ ಹೊಸಲಿಗೆ ಬಿಳಿ ರಂಗೋಲಿ ಇಟ್ಟಂತೆ
ತಿಳಿ ಹಾಲಿನಿಂದ ಭುವಿಗೆ ಅಭಿಷೇಕ ಮಾಡಿದಂತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ