ಮನಸೆಲ್ಲವು ನೀನು
ಕನಸಲ್ಲಿಯು ನೀನು
ನನ್ನಲಿಯು ನೀನು
ಎಲ್ಲಿ ಎಲ್ಲಿಯೂ ನೀನು
ಸೂರ್ಯನ ಕಾಂತಿಯಲಿ ಇರುವ
ಹೊಳೆವ ಹೊಂಗಿರಣ ನೀನು
ವಜ್ರಗಳು ಮಿನುಗುವಂತೆ
ಮಿನುಗುವ ತಾರೆ ನೀನು
ಚಂದಿರನ ತಂಪು ನೀನು
ಮಂದಾರ ಕುಸುಮವು ನೀನು
ಇಂದಿರನು ನಾಚುವಂತ
ಸೌಂದರ್ಯದ ಕಡಲು ನೀನು
ಒಲವೆಂಬ ಸ್ನೇಹದ ಗುಡಿಯ
ಸುಂದರ ಕೆತ್ತನೆ ನೀನು
ಶಿಲ್ಪಿಯ ಮನಸಲಿ ಬಂದ
ಸೊಗಸಾದ ಕಲ್ಪನೆ ನೀನು
ಪ್ರಕ್ರುತಿಯಾ ಹಸಿರಿನ ಸೊಬಗ
ಸುರಿಸುವ ಕನ್ನಿಕೆ ನೀನು
ಸುರಿವ ಮಳೆ ಗಾಳಿಯಂತೆ
ಉಲ್ಲಸ ತರುವೆ ನೀನು
ಉಸಿರಲಿ ಉಸಿರಾದೆ ನೀನು
ಹೆಸರಲ್ಲಿ ಹೆಸರದೆ ನೀನು
ಮೃದುವಾದ ನವಿಲು ಗರಿಯ
ನವಿರಾದ ಸ್ಪರ್ಶ ನೀನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ