ಸೋಮವಾರ, ಏಪ್ರಿಲ್ 20, 2009

ತೋರಿಸುತಿದ್ದೆ

ಏನು ತಿಳಿಸಲಿ ಪ್ರಿಯೆ
ನಿನ್ನ ಅಷ್ಟು ದೂರ ಇಟ್ಟುಕೊಂಡು
ಹಾಗೇ ಸುರಿಸುವೆ ಪ್ರೀತಿಯ ಮಳೆಯನ್ನ
ನೀ ಬಂದರೆ ನನ್ನ ಹುಡುಕಿಕೊಂಡು

ದೂರ ನಿಂತು ಮತನಾಡದೆ ಹತ್ತಿರ ಬಂದರೆ
ತೋರಿಸತಿದ್ದೆ ಲಗು ಬಗೆ ಇಂದ ನುಡಿವ ನನ್ನ
ಹೃದಯ ಕವಾಟದ ಬಾಗಿಲಿನ ಚಿಲಕ ತೆಗೆದು
ನನಗಾಗಿ ಮಿಡಿಯುವ ಒಳಗಿರುವ ನಿನ್ನ ಬಿಂಬವನ್ನ

ಆದರದಿಂದ ಬಂದು ಬಿಗಿದಪ್ಪಿದರೆ
ತೋರಿಸುತಿದ್ದೆ ನಿನ್ನ ಉಸಿರ
ಏರಿಳಿತಗಳ ಮಧ್ಯ ಬರುವ ಆ ಲಯದ
ಸ್ವರದಲ್ಲಿ ಅಡಗಿರುವ ಸ್ಪಂದಿಸುವ
ನನ್ನ ಮನಸಿನ ತುಡಿತವನ್ನ

ಮೈ ಮರೆತು ಸುಮ್ಮನೆ ಚುಂಬಿಸಿದ್ದರೆ
ತೋರಿಸುತಿದ್ದೆ ನಿನ್ನ ಪ್ರೀತಿಯ
ದುಗುಡದ ಒಳಗಿನ ಸರಸ ಸಲ್ಲಾಪದ
ಮಂಥನದಿಂದ ಬಂದ ಅಮೃತದ
ಸವಿಯ ಸುಧೆಯ ಆ ರುಚಿಯನ್ನು

ಕಾಂತಿಯ ಕಣ್ಣಿನಿಂದ ಒಮ್ಮೆ ನೋಡಿದರೆ
ತೋರಿಸತಿದ್ದೆ ಅದರೋಳಗಿನ ರೇಖೆಗಳ
ಪ್ರತಿಬಿಂಬದ ಸೃಷ್ಟಿಯಿಂದ ಮೂಡಿಸುವ
ಕಾಮನ ಬಿಲ್ಲಿನ ಹಿಂದಿರುವ ಬಣ್ಣಗಳು ತುಂಬಿದ
ನೀ ಇರುವ ಆ ನನ್ನ ಕನಸಿನ ಲೋಕವನ್ನು

:ಪ್ರಭಂಜನ ಮುತ್ತಿಗಿ

ಬುಧವಾರ, ಏಪ್ರಿಲ್ 15, 2009

ಇರುವುದೆಲ್ಲವ ಬಿಟ್ಟು

ಯಾವ ಉರಲಿ ನಡೆದೆ ಕೊನೆಯಲಿ
ನಿನ್ನ ಹುಡುಕುತ ಮೆಲ್ಲಗೆ
ಹಸಿರ ಹಾಸಿನ ಬೆಟ್ಟ ದಾಟಿದೆ
ನಿನ್ನ ಸುಳಿವು ಇಲ್ಲದೆ

ಮಂಜು ಮುಸುಕಿದ ಮೋಡದಲ್ಲಿಯು
ನಿನ್ನ ಕಾಣುತ ಹರುಷದಿ
ಗಾಳಿ ಬೀಸಲು ಕರಗಿ ಹೋಯಿತು
ಕನಸು ಸೊರಗಿತು ಆ ಕ್ಷಣದಲಿ

ದಟ್ಟ ಕಾಡಲು ಬಿಂಬ ಕಾಣಲು
ನಡೆದೆ ಅಂಜಿಕೆ ಇಲ್ಲದೆ
ಭ್ರಮೆಯ ರೂಪವು ಹಾರಿ ಹೋಗಲು
ಸುತ್ತಲು ಕತ್ತಲು ಆವರಿಸಿತು

ಹೆಜ್ಜೆ ಗುರಿತಿನ ಎಳೆಯ ಹಿಡಿದು
ಹೋದೆ ನದಿ ಅಂಚಿನ ಮರಳಲಿ
ಬಿಸಿಲು ಏರಲು ಕಾಣದಾಗಿತು
ಕವಲು ವಡೆಯಿತು ದಾರಿಯು

ಎಲ್ಲಿ ಹುಡುಕಿದರೇನು ನಿನ್ನನು
ಸಿಗುವುದೆಂದೋ ತಿಳಿಯದು
ಇರುವುದೆಲ್ಲವ ಬಿಟ್ಟು ನಿನ್ನನು
ಹುಡುಕದೆ ಜೀವನ ಸಾಗದು

:ಪ್ರಭಂಜನ ಮುತ್ತಿಗಿ

ಗುರುವಾರ, ಏಪ್ರಿಲ್ 9, 2009

ಹನಿ

ಹನಿ
***********************
೧.
ನಿನ್ನ ಚಲುವ ವರ್ಣಿಸಿ ..
ಬರಿಯಬೇಕೆಂದುಕೊಂಡೆ ಒಂದು ಕವನ..
ನಿನ್ನ ನೋಡದೆ ಹೇಗೆ ವರ್ಣಿಸಲಿ
ಅ ನಿನ್ನ ಕಮಲ ನಯನ !..
೨.
ಹುಡುಗಿ : ಕವನಗಳು ಬೇಕು ..
ಮನ ಮೆಚ್ಹಿಸಲು ..
ಹುಡುಗ : ಕವನ ಬೇಡ, ಹೃದಯದಲಿ
ಜಾಗ ಕೊಡು .. ಸಾಕು ನಿನ್ನ ಅರ್ಚಿಸಲು...

೩ ನಿಮ್ಮ ಹೆಸರನು ಚಂದ್ರನ ಮೇಲೆ
ಬರಿಯುವ ಅಸೆ
ಆದರೆ ಏನು ಮಾಡುವುದು
ಅಸೆ ಬಂದ ದಿನ ಅಮಾವಾಸೆ

೪ ನೀನಿಲ್ಲದೆ ನನಗೆ ಆಗದು ಬೆಳಕು
ನಿನ್ನ ಗೆಳತಿ ಎದುರಿಗೇ ಬಂದರೆ ಎಂಥ ಥಳಕು
ಅವಳನ್ನ ನಾನು ನೋಡಿದರೆ
ಆಗುವುದು ನಿನ್ನ ಮನಸು ಕೊಳಕು

ಲೀನ ವಾಗಿ ಹೋಗಲಿ

ತುಟಿಗೆ ತುಟಿ ಸೇರಿದಾಗ
ನವಿರಾದ ಸ್ಪರ್ಶದ ಕಚಗುಳಿ ..
ಪುಸು ಮಾತು , ಸಿಹಿ ನುಡಿ
ಹೊಸ ಸಂಚಲನ ಮಾಡಿಸುವುದು
ಮನಸಲ್ಲಿ ಅಲ್ಲೋಲ ಕಲ್ಲೋಲ..ಅದು
ಆಸೆಯ ಹೊಳೆ ಹರಿಯುವುದು
ಸ್ಪಟಿಕದ ನೀರಂತೆ ..
ಪ್ರೀತಿಯ ಸೆಲೆಯಾಗಿ
ಪ್ರೀಮದ ಸ್ಪೋರ್ತಿಯಾಗಿ
ನಾಡಿಯ ಮಿಡಿತವಾಗಿ
ಕವಲಿಲ್ಲದ ದಾರಿಯಲ್ಲಿ ...
ಲೀನ ವಾಗಿ ಹೋಗಲಿ.. ಪ್ರೀತಿ,
ಪ್ರೇಮ ಎಂಬ ಮಹಾ ಸಾಗರದಲ್ಲಿ.

ಕವನ

ಕವನಕ್ಕೆ ಬೇಕು ಪದ..
ಪದಕ್ಕೆ ಬೇಕು ಅರ್ಥ..
ಅರ್ಥ ಬರಲು ಮೂಡಬೇಕು
ಮನಸಿನಲ್ಲಿ ಅದರ ಆ ಆಕಾರ..
ಅದರಿಂದ ಹೊರ ಹೊಮ್ಮುವುದು
ಕವನಗಳ ಹೊಸ ಅವಿಸ್ಕಾರ ...

ಮತ್ತದೇ ಜೀವನ

*************************
ಇದ್ದು ಇಲ್ಲದವರು ಸಿಗುವರು ಬಹಳ...
ಇಲ್ಲದೆ ಇದ್ದವರು ಅತೀ ವಿರಳ..
ಇದ್ದು ಇಲ್ಲದವರು ಸಲ್ಲುವರು ಜಗದೊಳಗೆ
ಇಲ್ಲದೆ ಇದ್ದವರು.. ಗೆಲ್ಲವರು ಮನದೊಳಗೆ
ಸೋಲು ಗೆಳವುಗಳ ಮಧ್ಯೆ ಇದೆ ನಿರಾಕಾರ
ಇದ್ದವರ ಇಲ್ಲದವರ ಮಧ್ಯ ಅಂತರ ನಿರಂತರ
ಗೆಲ್ಲಲೇ ಬೇಕು ಎನ್ನುವರಿಗೆ ಬೇಕು ಹೊಸ ಪರಿಸರ
ಇದೆಲ್ಲದರ ನಡುವೆ ಉರುಳುತಿದೆ
ಮತ್ತದೇ ಜೀವನ ಹೊಸ ವರುಷ ಹೊಸ ಆರಂಭ!!!

ಪ್ರಕೃತಿ ದ್ವಂದ್ವ

ಕವನಗಳ ನಡುವೆ ನೆದದಿದೆ ಜಗ್ಗಾಟ
ನಾ ಸುಂದರ.. ನಾ ಹಂದರ ಈ ಪದದೊಳಗೆ..
ಹಗಲು ಇರುಳುಗಳ ನಡುವೆ ನೆದದಿದೆ ಪರದಾಟ..
ನಾ ಮುಂದು ನೀ ಮುಂದು ಈ ಓಟದೊಳಗೆ..
ಸುರಿವ ತಂಗಾಳಿ ಮಳೆ ನಡುವೆ ಹೊರಲಾಟ..
ನಾ ತಂಪು.. ನೀ ಬಿಸಿ ಈ ಪ್ರಕೃತಿ ಒಳಗೆ..
ಹೃದಯಗಳ ನಡುವೆ ನೆದದಿದೆ ಗುದ್ದಾಟ..
ನಾ ಹೆಚ್ಹು ನೀ ಹೆಚ್ಹು ಜಾಗ ಕೊಟ್ಟಿರುವೆ !..
ಮನಸುಗಳ ನಡುವೆ ನೆದದಿದೆ ಹೊಡೆದಾಟ
ನಾ ಕಡಿಮೆ ನೀ ಕಡಿಮೆ ನೋಯಿಸಿರುವೆ..
ಕಣ್ಣು ಕಣ್ಣುಗಳ ಒರೆನೋಟ ನಡುವೆ ಹೋರಾಟ
ನ ಮೊದಲು ನೀ ಮೊದಲು ಸೆರೆಹಿದಿದಿರುವೆ ನಿನ್ನ..
ಕವನದ ಒಳ ಕಣ್ಣಿನ ಹೃದಯ ಮನಸಿನೊಳಗೆ
ಹಗಲು ಇರುಳು ಸುರಿಉತಿದೆ ಮಳೆ ತಂಗಾಳಿ
ಈ ತೊಲಲಾಟದ ನಡುವೆ ಹುಡುಕುತಿದೆ..
ನಾ, ನೀ, ನೀ, ನಾ.. ಯಾರು .ಎಲ್ಲದರ ಒಳಗೆ!
ಆದರೆ .. ಎಲ್ಲಿಯೂ ಇಲ್ಲ ಸರಿ ಉತ್ತರ ಇದಕೆ...

ದೀಪಾವಳಿ


ಬಂತು ಮತ್ತೆ ದೀಪಾವಳಿ,
ಶರದ್ಋತುವಿನ ಚಳಿಯೊಂದಿಗೆ..
ತುಂತುರು ಹನಿ ಮಳೆಯಲ್ಲಿ..
ಕೆಸರಿನ ನಡು ರಸ್ತೆಯಲ್ಲಿ..

ಕೆಂಪು ಪಟಾಕಿಯ ಧಂ ಧಂ ಶಬ್ದ..
ಸುರ್ ಎಂದು ಹಾರುವ ರಾಕೆಟ್ ..
ಧೂಪನೆ ಮಳೆ ಕರದಂತೆ..
ಹೂಕುಂಡ... ಭೂಚಕ್ರ
ಸುರು ಸುರು.. ಎನ್ನುವ ದೀಪದ ಕಡ್ಡಿ..
ಯುಧ ನೆನಪಿಸುವ ಬಾಂಬ್ ಪಟಾಕಿ..
ಒಂದೇ ಎರಡೇ,

ಇವೆಲ್ಲದರ ಮಧ್ಯ
ಸಂಸ್ಕೃತಿ ನೆನಪಿಸುವ..
ಆಕಾಶ ಬುಟ್ಟಿ,..ಮಣ್ಣಿನ ಹಣತೆ..
ಬೆಚ್ಚಗಿನ ಬತ್ತಿ ತುದಿಯಲ್ಲಿ ಬೆಳಗುತಿದೆ ದೀಪ..
ಹೇಳುತಿದೆ ನೀತಿ..

ಜ್ಞಾನ ವೆಂಬ ದೀಪ ಉರಿಸಲು..
ಅಜ್ಞಾನ ಎಂಬ ಎಣ್ಣೆಯಿಂದ,
ಬತ್ತಿ ಎಂಬ ಅಹಂಕಾರವ ಸುಟ್ಟು,
ಪ್ರಕಶಿಸಲಿ ನಿಮ್ಮ ಮನೆ ಮನ....

ಎಷ್ಟೊಂದು ಅರ್ಥ ಗರ್ಭಿತ .. ಈ ದೀಪಾವಳಿ..
ನಮ್ಮ ಅಜ್ಞಾನ ಕೆಳರಿಯದಸ್ಟು.....ಈಗ...
ನಮ್ಮ ಅಹಂಕಾರ.. ನಿಳುಕದಸ್ಟು.. ಬೇಗ.. ಈಗ ಈಗ ...

ಹೇ, ದೀಪಾವಳಿ.. ವರುಷಕೊಮ್ಮೆ ಬೇಡ..
ಬರುತಾನೆ ಇರು ದಿನಕ್ಕೊಮ್ಮೆ..
ಎಲ್ಲರ ಮನದಲ್ಲಿ.. ಮನೆಗಳಲ್ಲಿ..

ಪ್ರಭಂಜನ ಮುತ್ತಿಗಿ

ಮುಖ ಕಮಲ

ಮುಂಗುರುಳು ನಾಚಿಸುವ
ನವಿರಾದ ನೈದಿಲೆಯ ಎರೆಡು ಎಳೆ ಕೇಶ
ಸುರಸುಂದರ ಸಿಂಧೋರ
ಬಿಲ್ಲು ಬೆರಗಗುವಂಥ ಹುಬ್ಬು
ಕೆನ್ದಾವರೆಯ ಒರಯಸುವ ಕಣ್ಣು
ಮುದ್ದಾಗಿ ತೀಡಿದ ಮೂಗು..
ಹಾಲ್ಗಲ್ಲದ ಮೇಲೆನ ಹವಳದ ತುಟಿ
ಮುಗುಳ್ನಗೆಯ ಮುಖಕೆ..ಸೋತು ಬಿದ್ದ ಕಿವಿಯೋಲೆ
ಪೂರ್ಣಿಮೆಯ ಹೋಲುವ ಈ ಮುಖ ಕಮಲ
ತಂಪು ಚೆಲ್ಲಿ ಸೂಸುತಿದೆ ಪ್ರಭೆಯ ಪ್ರಕಾಶ.
ಇಸ್ಟು ವರ್ಣಿಸಲು ಅಸದಳವಗುವ ಸೃಷ್ಟಿಯ
ಕಣ್ಮನ ತಣಿಸುವ ಸಮಿಪ್ಯ್ ನನ್ನದಾಗಿರಲಿ..
ಕಿಚ್ಹು ಹೆಚ್ಹಿಸುವ ಸೌಂದರ್ಯ ಕ್ಕಿಂತ ...
ಹುಚ್ಹು ಹಿಡಿಸುವ ಹೃದಯದಾಳದ ಮಾತು
ಮುಚ್ಹುಮರೆ ಇಲ್ಲದಯೇ ಸುರಿಯುತಿರಲಿ.

ನಗು

ನಗು ಶಬ್ದ ಕೇಳಿದರೆ
ಯಷ್ಟು ಉಲ್ಲಾಸ ಮನಸಲ್ಲಿ
ಇನ್ನು ನಕ್ಕರೆ..
ಮುಖದ ಸ್ನಾಯುಗಳ ಸಂಚಲನ
ಅದರ ಜೊತೆಗೆ ದಂತ ದರ್ಶನ
ಕಣ್ಣುಗಳ ಕಿರಿ ನೋಟ
ಧೀರ್ಗವಾದ ಉಸಿರಾಟ
ಕಿಲ ಕಿಲ ಶಬ್ದದ ನಿನಾದ
ಕೈ ಕಾಲುಗಳ ತಾಳ ಮೇಳ
ಜೊತೆಗಿರುವವರ ನಗಿಸುತ
ನಗುವ ಈ ನಗು ನಮಗೆ
ಎಸ್ಟು ಉಪಯೊಗ ... ಅದಕ್ಕೆ
ನೀನು ನಕ್ಕು ಬಿಡು..
ಉಳಿದವರ ನಗಿಸಿ ಬಿಡು..

ಪ್ರಕೃತಿ

ಬಿಸಿಲಿನ ಜೊತೆ ಮಳೆ ಬಂದ ಕ್ಷಣದಲಿ
ಆಕಾಶದ ಅಂಚಿನಲ್ಲಿ ಮೂಡುವ ಕಾಮನ ಬಿಲ್ಲು
ನಮ್ಮೆಲ್ಲರ ಕಣ್ಣ್ಮನ ಸೆಳೆಯುವುದು

ಹೂವಿನ ಮಕರಂದ ಹೀರಲು ಬರುವ
ಹಲವು ಬಣ್ಣಗಳಿಂದ ಕೊಡಿದ ಚಿಟ್ಟೆಗಳು
ಮಗುವಿಗೂ ಮಂದಹಾಸ ಮೂಡಿಸುವುದು

ಕಣ್ಣ ನೋಟದಲ್ಲೇ ಆಕರ್ಷಿತವಾಗುವ
ಅತಿಸುಂದರ ಬಣ್ಣಗಳ ಬಟ್ಟೆ ಧರಿಸಿದ ನಾರಿ
ಗೆಲ್ಲವಳು ಎಲ್ಲರ ಹೃದಯ ಬಾರಿ ಬಾರಿ

ಕಾನನದ ಮಧ್ಯದಲ್ಲಿ ಇರಿಲು ನಸು ಬೆಳಕಿನಲ್ಲಿ
ಹರಡಿರುವ ಹೂ, ಮರಗಳ ನೋಟ
ವಿಸ್ಮಯ ದ ಜೊತೆ ರೋಮಾಂಚನ ಮೂಡಿಸುವುದು

ಹೋಳಿ


ಚಲುವನ್ನೇ ಅಳಿದು
ಹೃದಯಗಳ ಗೆಲ್ಲು,
ಎಲ್ಲರ ಜೊತೆ ಜೊತೆಗೂಡಿ ,
ವಿವಿಧ ಬಣ್ಣಗಳ ಬಳಿದು.

ಆಡಲಿ ಬಣ್ಣಗಳ
ಜೊತೆ ಪ್ರೀತಿಯ ಚಲ್ಲಟ,
ಒಳ ಕಣ್ಣ ತೆರೆದು ಆಸ್ವಾದಿಸು
ಆ ಕಾಮನ ಬಿಲ್ಲಿನ ನೋಟ

ಪೂರ್ಣ ಚಂದಿರನ ಪ್ರಭೆಯಲ್ಲಿ
ತಿಳಿ ಹಾಲಿನಂತಹ ಹೊಳೆವ ಬಣ್ಣ
ಕಾಮ(ನ) ನಿಗ್ರಹ ಸಂಕೇತದ
ಹೋಳಿ ಓಕುಳಿ ತೊಳೆದ ಬಣ್ಣ

ತರಲಿ ಬಣ್ಣಗಳು ನಮ್ಮಲ್ಲಿ
ಚಿತ್ತಾರದ ಚಲುವಿನ ಹೂಮಳೆ
ಹೀಗೆ ನಿರಂತರ ಹರಿಯುತಿರಲಿ
ಎಲ್ಲಿ ಎಲ್ಲಿಯೂ ಬಣ್ಣ ಬಣ್ಣದಾ ಹೊಳೆ

ವಸಂತ

ಉದುರಿದ ಎಲೆಗಳ ರೆಂಬೆ
ಚಿಗುರೊಡೆದ ಕೊಂಬೆ
ಚೆಂದದ ಹೊಮುಡಿದ ರಂಭೆ
ತಿಳಿ ಹಸಿರ ಹೊಮ್ಬಣ್ಣ ಕಂಡೆ
ದುಂಬಿಯ ಝೇಂಕಾರ ನಾದ
ತಿಳಿ ಬಿಸಿಲಿನ ಸ್ವಾದ
ಕಂಗೊಳಿಸುವ ಚಗುರೆಲೆಯ ಕಂಪು
ಮನಸಿಗೆ ಕೊಡುವುದು ಇಂಪು
ಮಾವಿನ ಮರದ ಚಿಗುರ ತಿಂದು
ಸ್ವರ ಹಿಡಿದು ಹಾಡುವ ಹಾಡು..
ಬೀವಿನ ಸಿಹಿ ಕಹಿ ಯ ಜೊತೆಗೆ
ತೇಲಿಸಲಿ ಹುರುದಯ ಬಡಿತ..
ಆಸೆಗಳ ಚಿಗುರೋಡೆದು ಮನಸು
ಹೊರಹಕಲಿ ಹೊಚ್ಹ ಹೊಸ ಕನಸು
ಪ್ರೀತಿಯ ಹಸಿರನ್ನು ಹೊದಿಸಿ..
ಪ್ರೇಮದ ಕಂಪು ತೊಡಿಸಿ..
ಹೆಹೆಹೆ ಇದು ವಸಂತ
ಎಲ್ಲಿ ಎಲ್ಲಿಯೂ ಹೊಸ ದಿಗಂತ
ತಂದಿತು ಎಲ್ಲರಿಗೂ ಹರುಷ
ಸುರುವಾಯಿತು ಹೊಸ ವರುಷ
:ಪ್ರಭಂಜನ ಮುತ್ತಿಗಿ

ಉತ್ತರ

ಮನಸು ನುಡಿ ನುಡಿದಾಗ
ಹೃದಯ ಕೇಳುವುದೇಕೆ?
ಹೃದಯ ತೆರೆ ತೆರೆದಾಗ
ಮನಸು ಹಾರುವುದೇಕೆ?
ಪ್ರೀತಿ ಗರಿ ಕೆದರಿದಾಗ
ಪ್ರೇಮ ಉಕ್ಕುವುದೇಕೆ?
ಮುತ್ತು ಮಳೆ ಸುರಿದಾಗ
ಮಾತು ಮಾಯವಾಗುವುದೇಕೆ?
ಚಂದಿರನ ಆಕರ್ಷಣೆಯಿಂದ
ಸಾಗರ ಭೋರ್ಗರೆಯುವುದೇಕೆ ?
ಇದಕ್ಕೆಲ್ಲ ಉತ್ತರ ಇದ್ದರೂ 
ಅಗೋಚರವಾಗಿ ಇರುವುದು ಏಕೆ!