ಗಿಳಿಯೇ ಗಿಳಿಯೇ ಮುದ್ದಿನ ಗಿಳಿಯೇ
ಹಾರುತ ಎಲ್ಲಿಗೆ ಹೋಗಿರುವೆ
ನಿನ್ನಯ ಕನ್ನಡ ಮಾತನು ಕೇಳಲು
ಕಾತರದಿ ಕಾಯುತ ಕುಳಿತಿರುವೆ
ಮೂಡಣ ಪಡುವಣ ಬಡವಣ ತೆಂಕಣ
ಗಡಿಗಳ ತಾಣಕೆ ಹೋಗಿರುವೆ
ನೋಡುತ ನಲಿಯುತ ಹಾರುತ ಆನಂದದಿ
ಕಣ್ತುಂಬಿ ಉಲ್ಲಾಸದಿ ಬರುತಿರುವೆ
ಗೋಳಗುಂಬಜ ಮನ ಸೆಳೆಯುತಲಿ
ನಿನ್ನ ದನಿಗೆ ಪ್ರತಿದನಿ ನೀಡುತಿದೆ
ದಾಸರ ಶರಣರ ವಚನ ಸಾಹಿತ್ಯ
ಬದುಕಿನ ಪರಿ ಪಾಠ ಸಾರುತಿವೆ
ಕೃಷ್ಣ ಭೀಮಯರು ತುಂಬಿ ಹರಿಯುತಲಿ
ಧರೆಗೆ ಸೀರೆಯ ಉಡುಸುತಿವೆ
ಬಾದಾಮಿ ಐಹೊಳೆ ಗುಹಾ ದೇವಾಲಯ
ಚಾಲುಕ್ಯರ ಇತಿಹಾಸ ತಿಳಿಸುತಿದೆ
ವಿಜಯನಗರ ಕಲ್ಲಿನ ತೇರಿನಲ್ಲಿ
ಸಂಗೀತ ದುಂದುಭಿ ಮೊಗಳುತಿದೆ
ತುಂಗಭದ್ರ-ತಟ ಹನುಮನ ಹಂಪೆಯು
ವೈಭವ ಸಾಮ್ರಾಜ್ಯದ ಕಥೆ ಹೇಳುತಿದೆ
ಕಿತ್ತೂರ ಚನ್ನಮ್ಮ ರಾಣಿ ಒಬಕ್ಕ
ಒನಕೆ ಓಬವ್ವ ನಮ್ಮ ನಾಡಿನಾ ಹೆಮ್ಮೆ
ಗಂಡು ಮೆಟ್ಟಿದಾ ನಾಡು ಕರ್ನಾಟಕ
ಕುಂದ, ಫೆಡೆ, ಮಿರ್ಚಿ ತಿನಿಸುತಿದೆ
ಹೊರನಾಡು ಅನ್ನಮ್ಮ ಶೃಂಗೇರಿ ಶಾರದೆ
ಕೊಲ್ಲೂರು ಮೂಕಾಂಬಿಕೆ ಹರಸುತಿಹೆ
ಬೇಳೂರು ಹಳೇಬೀಡು ಸೋಮನಾಥಪುರ
ಮೇರು ಶಿಲ್ಪಿ ಕಲೆಯಲಿ ಹೊಳೆಯುತಿವೆ
ಪಶ್ಚಿಮ ಘಟ್ಟಗಳ ನದಿ ಸಾಗರದಂಚಲಿ
ಜಲಪಾತ ಬೆಟ್ಟಸಾಲು ಕಣ್ಣ್ ಸೆಳೆದಿವೆ
ದೈವಗಳ ನಿತ್ಯ ಆರಾಧನೆಯಲಿ
ಪ್ರಸಾದ, ದಾಸೋಹ ನೆಡೆಯುತಿವೆ
ಕೊಡಗಲಿ ಧರೆಗಿಳಿದು ಜೀವನಾಡಿಯಾಗಿ
ಹರಿವಳು ಪಡುವಣದಲೆಲ್ಲಾ ಕಾವೇರಿ
ಬೆಂಗಳೂರು ಹೆಸರಾ ಮೈಸೂರು ದಸರಾ
ಬೆಳಗುತಿದೆ ಇಂದಿಗೂ ಜಯಭೇರಿ
ಕನ್ನಡ ನಾಡಿದು ಕನ್ನಡ ನುಡಿಯಿದು
ಸಂಸ್ಕಾರದ ಸಂಸ್ಕೃತಿ ತವರೂರು
ಕನ್ನಡ ಕನ್ನಡ ಕನ್ನಡ ಎನ್ನುತ
ಮಿಡಿಯುತಿದೆ ನೋಡು ನನ್ನೆದೆಯು