ಬಾಗಿಲಾ ಪಕ್ಕದಲ್ಲಿ
ನಿಂತಿರುವ ಸ್ಕೂಟರ್
ಹಳೆಯ ನೆನಪೊಂದು ಕೊಡುತಿಹುದು
ದಿನವೂ ಮುಂಜಾವಿನಲ್ಲಿ
ಬಾಗಿಸಿ ಕಿಕ್ ಹೊಡೆದು
ಕನಸ ತುಂಬಿ ಹೋಗ್ತಿದ್ದು ನನಪಾಯಿತು
ನಲ್ಲೆ ಹಿಂಬದಿಯಲ್ಲಿ
ಸೊಂಟ ಹಿಡಿದು ಕುಳಿತಿದ್ದು
ನೆನಪಿನಂಗಳದಲ್ಲಿ ಸುಳಿದುಹೋಯಿತು
ಕಾಲದಾ ಗರ್ಭದಲಿ
ಆಳಿದ ವರಳು ಹೊರಬಿದ್ದಂತೆ
ಗಾಡಿಯು ಹೊರಗೆ ಬಿದ್ದುಹೋಯಿತು
ಹೆಂಡತಿ ಹೊಸ ಮನೆಯಲ್ಲಿ
ಹಳೆ ಹುಡುಗಿ ನೆನಪಲ್ಲಿ
ಹಳೆ ಮನೆ, ಗಾಡಿ, ವರಳು ಸ್ಮಾರಕವಾಯಿತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ