ನವಿಲೊಂದು ಕುಣಿಯುತಿದೆ
ಗರಿಕೆದರಿ ಹನಿಮಳೆಗೆ
ಕಿವಿಯಲೇನೋ ಹೇಳುತಿದೆ
ಪ್ರೀತಿ ಸುರಿಸಿ ನಲ್ಲೆಗೆ
ಹಾಡೊಂದು ಹಾಡುತಿವೆ
ಇನಿದನಿಯ ರಾಗಕೆ
ಕೊಳಲೊಂದು ನುಡಿಯುವಂತೆ
ಮುಂಜಾವಿನ ತಾಳಕೆ
ಬಣ್ಣ ಚಲ್ಲಿ ಹಾರಾಡುತಿವೆ
ಮಂಜು ಮುಸಿಕಿದ ಮೋಡಕೆ
ಹೊಂಬಿಸಿಲು ಸವಿಯುತಲಿ
ಪ್ರೀತಿ ಹಂಚುತ ಮೆಲ್ಲಗೆ
ನಲಿದುಬಿಡು ನವಿಲಿನಹಾಗೆ
ನೋವಿನಲಿರುವುದೇನಿದೆ
ಇಂದು ಮುಂದು ಎಂದೆಂದೂ
ಒಲವೇ ಭಾವ ಬದುಕಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ