ಹಣೆಯಲ್ಲಿ ಬರೆದಾ ಹೆಸರು
ಲಗ್ನ-ಪತ್ರಿಕೆಯಲ್ಲಿ ಅಚ್ಚಾಗಬಹುದು
ಮನಸಲ್ಲಿ ಅಚ್ಚಾದ ಹೆಸರು
ಅಚ್ಚಳಿಯದೆ ಉಳಿದುಬಿಡಬಹುದು
ಮರಳಿನ ಮೇಲೆ ಬರೆದ ಹೆಸರು
ಉರುಳಿ ಅಳಿಸಿ ಹೋಗಬಹುದು
ಹಣೆಯಲ್ಲಿ ಬ್ರಹ್ಮ ಗೀಚಿದಮೇಲೆ
ಪ್ರೀತಿ ಇರದಿದ್ದರೂ ಜೊತೆ ಜೀವಿಸಬಹುದು
ಉಸಿರಿನಲ್ಲಿ ಬರೆದ ಹೆಸರು
ಮೂಡಿದ ಹೂವಿನೊಳಗೂ ಇರದಿರಬಹುದು
ಹೃದಯದಲ್ಲಿ ಇರುವ ಹೆಸರು
ಮುಡಿಯದಿದ್ದರೂ ಹಸಿರು ಉಸಿರಿರೋವರೆಗೂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ