ಅರಳಿ ನಗುವ ಹೂವು ನೀನು
ಮರಳಿ ಬರುವ ದುಂಬಿ ನಾನು \\ ಪ \\
ತೇಲಿ ಬರುವೆ ದೋಣಿಯಲ್ಲಿ
ತೇಲುವ ಲತೆಗಳ ದೂರ ತಳ್ಳಿ
ರಾಗ ಭಾವ ಅರಿತು ಬೆರೆತು
ಕೈಗೆಟುಕು ಬಾ ಬಿಗುಮಾನದಲ್ಲೇ
ಕೃಷಿಕ ನಾನು ಕೊಯ್ಲು ನೀನು
ಅದರೂನು ನಿನ್ನ ಪ್ರೇಮಿ ನಾನು
ದಿನವೂ ನಿತ್ಯ ಕೊಯ್ದರೂನು
ನೋವು ಮಾಡದೆ ಹಿಡಿವೆ ನಾನು
ಕೆರೆಯ ಹೂ ಆದರೂ ನೀ
ನಸುಗಂಪು ಸೂಸಿ ಸೆಳೆಯುತಿರುವೆ
ನಿನ್ನ ಹೃದಯ ಅರಸಿ ಬರಲು
ನನ್ನನ್ನೇ ನಾನು ಮರೆತು ಬಿಡುವೆ
ಬೆವರು ಸುರಿಸಿ ನಿನ್ನ ಹಿಡಿವೆ
ತಂಗಾಳಿ ತಂಪು ನೀನು ತರುವೆ
ಸಿರಿಯ ಸುಖವ ಕಾಣೆ ನಾನು
ಇಲ್ಲಿಯ ಸುಖನಿದ್ರೆಗೆ ಕಾರಣ ನೀನು
ಉಸಿರು ಉಸಿರಲಿ ಇರುವೆ ನೀನು
ನಗುತ ಬರುವೆ ಇರುಳ ಕನಸಿನೊಳಗೆ
ಅನಂತ ಅಂಬರದ ಬಿಂಬದ ನಡುವೆ
ಆದರಿಸಿ ಆರಾಧಿಸುವೆ ದೋಣಿಯೊಳಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ