ಗುರುವಾರ, ಆಗಸ್ಟ್ 5, 2021

ಅರಳದ ಹೂ


ಹೂ ಗಳಿವೆ ಕೊಳ್ಳ ಬನ್ನಿ,
ಕೊಳ್ಳಬಹುದು ಗುಲಾಬಿ
ಅರಳಿದನಂತರವೂ,

ಅರಳದ ಮುಂಚೆ ಬರಿಗಾಲಲ್ಲಿ
ನೆಡೆದು ಮಾರಬೇಕು ನಾನು
ಮುಳ್ಳು ತರಿದರು ಸರಿಯೇ
ಕೊಳ್ಳೇನೆನ್ನದಿರಿ ನೀವು

ತಳ್ಳ ಗಾಡಿಯಂದದಿ ಜೀವ
ಕೊಳ್ಳಿ ಹಿಡಿದಂತಾಗಿದೆ
ಕೊಂಡು ಕೊಂಡರೆ ಹೂ
ಕಳೆವುದು ದಿನದ ಹಸಿವೆ

ಕೆಂಪು ವಾಹನದಾ ಬಣ್ಣ
ಕಂಪು ಗುಲಾಬಿಯು ಚನ್ನ
ಮಂಪರಿನಲ್ಲಿದ್ದರೆ ಎದ್ದು ಕೊಳ್ಳಿ
ತಂಪಾಗಿ ಹರಿಸುವುದು ಕರುಳ ಬಳ್ಳಿ

ಬೇಕಿತ್ತಾ ಈ ನೆನಪು

 ಬೇಕಿತ್ತಾ ಈ ನೆನಪು 
ನೀ ದೂರ ಹೋದ ಕ್ಷಣವೇ  pa

ಹೃದಯವು  ಜರಿದರೇನಂತೆ 
ಮನಸು ನಿನ್ನೆ ಬಯಸುತಿದೆ  apa

ನೀ ನೆಡೆದ ಕೋಣೆಯಲಿ 
ಹಳೆ ನೆನಪು  ಕಾಡುತಿವೆ
ನಿಂತಿರುವ ಕನ್ನಡಿಯೊಳಗೆ 
ನೀ ಇರುವಂತೆ ತೋರುತಿದೆ 1

ನೀ ನೆಟ್ಟ ಹೂ ಗಿಡಗಳಲಿ 
ಹೂಗಳು ನಗದೇ ಬಾಡುತಿವೆ   
ನಾ ಹೇಗೆ ನಗಲಿ ನೀನಿಲ್ಲದೆ 
ನಿನಗಾಗಿ ಇಂದಿಗೂ ಕಾದಿರುವೆ 2 
 
ನಿನ್ನಂತೆಯೇ ನೆಡೆವಾಗ 
ಈ ಜಗಳಗ  ಬೇಕಿತ್ತೇ  
ವೈಮನಸ್ಸು ಏನೇ ಇರಲಿ 
ಬಂದುಬಿಡು ಕಾಯುತಿರುವೆ  3

ಅಂದಿನ ಶಾಲೆ*


ಶಾಲೆಯೇ ನನ್ನ ಮನೆ 
ಮನೆಯೇ ನನ್ನ ಶಾಲೆ 
ಆಗಿತ್ತು  ಅದೆಷ್ಟು ಚನ್ನ 

ನೆಲವೇ ನಮ್ಮ ಬೆಂಚು 
ಬೆಂಚೆ ರಟ್ಟಿನ ಅಂಚು 
ಹಾಕಿದ್ದೆ ಅರ್ಧ ಚಣ್ಣ 

ಓದಿ ಮಲಗಿದರೂ 
ಮಲಗಿ ಓದಿದರೂ 
ಬೈಯುವರಿರಲಿಲ್ಲ ಅಣ್ಣ 

ಆಟದ ಜೊತೆ ಪಾಠ 
ಪಾಠದ ಜೊತೆ ಆಟ 
ಸವಿನೆನಪು ಇಂದಿಗೂ ಚಿನ್ನ 

ಸೋಮವಾರ, ಆಗಸ್ಟ್ 2, 2021

ಕಳೆದು ಹೋಗು ನೀ

ಕಳೆದು ಹೋಗು ನೀ 
ಅರ್ಧ ರಾತ್ರಿಯಲಿ 
ಕನಸುಗಳ ಸೀಳಿ 
ನನಸುಗಳ ಬೆಳಕಲ್ಲಿ 

ಪೂರ್ಣ ಚಂದಿರನು 
ಸಣ್ಣವನಾಗಿಹನಲ್ಲಿ 
ತಿಳಿ ಹಾಲಿನಂತಹ 
ಬಿಳಿಯ ನಗುವ ಚಲ್ಲಿ 

ಅಂಬುಜನ ನೋಡುತ 
ಮುಂಗುರುಳು ಹಾರುತಲಿ 
ತನುವತಬ್ಬಿ ಮೈಮರೆತೆ 
ಮುಗುಳ್ನಗೆಯ ಚಲ್ಲಿ 

ಜಿಂಕೆಯನ್ನು ಏರಿ 
ಬಂದಿರುವರಾರಲ್ಲಿ 
ಮೋಹ ಪಾಶವ ಎಸೆದು 
ಸೆಳೆಯುತಿಹ  ಅಸೆಚಲ್ಲಿ  
 
ಬಚ್ಚಿಟ್ಟಿರುವೆ ನಿನ್ನ  
ನನ್ನ ಪುಟ್ಟ ಹೃದಯದಲ್ಲಿ 
ತೋರಿಸಿಬಿಡು ನಿನ್ನ ಬಿಂಬ 
ಆ ಪೂರ್ಣಚಂದಿರನಲ್ಲಿ