ಶನಿವಾರ, ಜುಲೈ 3, 2021

ಜರಿದ ಮನಸು


ಕನಸುಗಳು ಖಾಲಿಯಾಗಿವೆ 
ಮನಸು ಜರಿದ ಮೇಲೆ 
ಅಣುಕಿಸುತಿದೆ ಬಿಂಬಗಳು  
ಕನ್ನಡಿ ಒಡೆದು ಹೋದಮೇಲೆ 

ಇಳೆ ಬೆಳೆಯಲು ಮಳೆಯೇ ಬೇಕು  
ಮಳೆ ಮೋಡದ ಮುಲಾಜು 
ತಾಳ್ಮೆ ಸಾಗರದ ಆಳ ಅಗಲ  
ಅಳಿದು ತೂಗಿ ಮೋಡ  ಪ್ರಸವ 

ಕಳೆದುಕೊಳ್ಳುವುದೇನಿದೆ 
ಕೊಳೆತು ಹೋದಮೇಲೆ ಪ್ರೀತಿ
ಕಳೆ ತೆಗಿಯದಷ್ಟು ಬೆಳೆದಿದೆ 
ಕಾಳು ಬೆಳೆಯಲು ಸಾಧ್ಯವೇ  
 
ಹಣ ಚೆಲ್ಲಬಹುದು ಸಿಗದು
ಋಣವಿರಬೇಕು ಪ್ರೀತಿಗೂ 
ಒಣ ಮರ ತಾನಾಗೇ ಚಿಗುರದು  
ಹೆಣದ ಮೇಲೆ ಹಣ ಬಿದ್ದಂತೆ 

ಹುಟ್ಟು ಸಾವು ಒಂದು ಚಕ್ರ 
ಬಿಟ್ಟು ಬದುಕುವುದು  ವಕ್ರ 
ಕೊಟ್ಟು ಕ್ಕೊಳ್ಳುವುದು ಪ್ರೀತಿಗೆ ಹತ್ರ 
ಪಟ್ಟು ಹಿಡಿದರೆ ಬರೀ  ಅನರ್ಥ. 

ಮುಗುಳ್ನಗೆ

 ನಿನ್ನ ಮುಗುಳ್ನಗೆ ಅರಿತು 
ಕಣ್ಣು ಏನೋ ಹೇಳುತಿದೆ 
ಕಿವಿಯು ಕೇಳಲು ಕಾದಿದೆ   
ಪ್ರೀತಿಗೆ ಅದೊಂದೇ ಸಾಲದೇ 

ನೋಟದಳೊಂದು ನೋಟ 
ಚಿತ್ರಪಟವ ಬಿಡಿಸಿದೆ 
ತುಟಿಯು ತೆರೆಯದಂತೆ  ಏನೋ 
ವಿಷಯ ಚನ್ನಾಗಿ ತಿಳಿಸಿದೆ 

ಉಸಿರ ಏರಿಳಿತಕೆ ಹೃದಯ 
ತುಸು ಲಯದಲಿ ಮಿಡಿದಿದೆ 
ಹಸನಾಗಿ ಹಾರಿದ ನೈದಿಲೆ 
ಬೆಸುಗೆ ಬಯಸಿ ಕರೆದಿದೆ 

ಬಾಗಿದ ಹುಬ್ಬು ಏರಿ ಏನೋ 
ಆಶ್ಚರ್ಯವಾ ಸೂಸಿದೆ 
ಜೊತೆಗೆ ಏರಿ ಜೊತೆಗೆ ಇಳಿವ 
ಜೋಡಿ ನಾವೆಂದು ಸಾರಿವೆ 

ಇಲ್ಲಿಂದಲೇ

 ರೆಕ್ಕೆ ಬಿಚ್ಚಿ ಹಾರಿ ಹೋಗು

ಚಿಕ್ಕ ಆಳಕೂ ಇಲ್ಲದೆ   ।।  ಪ ।। 

ಕೊಕ್ಕೆಯಲ್ಲಿ ಪ್ರೀತಿ ಪತ್ರವಿದೆ     
ಅಕ್ಕ ಪಕ್ಕ ಯಾರನ್ನು ನೋಡದೆ  ।\ ಆ ಪ ।।

ನಿನ್ನ ಕಣ್ಣಿಗೂ ಕಾಣದ ನೋಟ 
ನನ್ನ ಹೃದಯ  ನೇರ ಕೊಡುತಿದೆ 
ಆದರೂ ಹುಡುಕು ಪಕ್ಷಿನೋಟ ತೀಕ್ಷ್ಣ 
ಬಿಡದೆ ಪ್ರಯತ್ನಿಸುವೆ ನಾ ಇಲ್ಲಿಂದಲೇ   1

ಸಿಕ್ಕರೆ ಹೇಳಿಬಿಡು ಅವಳಿಗೊಮ್ಮೆ 
ತೆಕ್ಕೆಯಲ್ಲಿ ಸೆರೆಹಿಡಿವೆ  ಎಂದಿನಂತೆ
ಪಕ್ವವಾಗುವುದು  ಓದಿದರೆ ಪತ್ರ   
ಮಿಕ್ಕಿದ್ದೆಲ್ಲಾ ನಿಭಾಯಿಸುವೆ  ನಾ ಇಲ್ಲಿಂದಲೇ  2

ಅರಿಯಳಾದಳು ಕ್ರೋದ ತುಂಬಿದ 
ನಾರಿ ಜರಿದು ದೂರ ಹೋದಳು 
ಕರೆಮಾಡಿಸು ಕಿವಿ ಆಲಿಸುವಂತೆ    
ಬರುವಂತೆ ಮಾಡುವೆ ನಾ ಇಲ್ಲಿಂದಲೇ  3