ಅಮ್ಮ ನಿನ್ನ ಮಡಿಲಲಿ ಮಲಗಿ
ಸುಮ್ಮನೆ ನಗುವೇ ನಿನ್ನ ನಗುವಿನಲಿ
ಗುಮ್ಮಾ ಬರಲಿ ಹೆದರದೆ ನಾನು
ಒಮ್ಮೆಲೇ ಓಡಿಸುವೆ ಹರುಷದಲಿ
ನನ್ನ ನಗುವಿನ ಚಿನ್ನಾಟದ ನೋಟ
ನಿನ್ನ ಬೊಗಸೆ ಕಣ್ಣಿನಲಿ ನೋಡುತ್ತಿರುವೆ
ನನ್ನ ನಗುವ ಸೊಬಗ ಸೆರೆಯಿಡಿಯಲು
ಚಿನ್ನ ಅಲ್ಲಿ ನೋಡು ನೀ ಎನ್ನುತ್ತಿರುವೆ
ಹಸಿವೆಯಲ್ಲೂ ಬಿಡದೇ ಹಾಲು ಉಣಿಸಿ
ಹೊಸ ಲೋಕ ನೀ ಪರಿಚಯಿಸುತ್ತಿರುವೆ
ಹುಸಿಮಾಡುವುದಿಲ್ಲ ನಿನ್ನ ಕನಸು
ಹೊಸಕಿ ಹಾಕುವೆ, ಬೆಳೆದು ಬಡತನದ ಬೇಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ