ಹರಿದು ಹೊಲೆಯಬೇಕಿತ್ತು ಅಂದು
ಹೊಸಾ ಬಟ್ಟೆಯ ಮೈ ಅಳೆತೆಗೆ
ಹೊಲೆದು ಹರಿದಾಗಿದೆ ಜೀವ ಇಂದು
ಹಳೇ ದ್ವೇಷಕ್ಕೆ ದೇಶ ನಲಗುತಿದೆ
ಹೊಸತನಕ್ಕೆ ಅಂಟಿಕೊಂಡರೂ ಅಂದು
ಹೊಲೆದ ರಾಟಿಯೇ ಇಂದಿಗೂ ಮೂಲ
ಹೊಸ ಜೀವಗಳ ನೆತ್ತರು ಹರಿಯುತ್ತಿದೆ ಇಂದು
ಹಳೇ ರಾಕ್ಷಸರೇ ಮೂಲ ಈ ಆತಂಕದ ಜಾಲ
ಹರಿದ ಬಟ್ಟೆಗಳ ಕತ್ತರಿಸಿ ಹೊಲೆದು
ಹೊಸಾ ಕನಸ ತುಂಬುವುದು ಅಮ್ಮನ ಕೆಲಸ
ಹರಿದ ರಕ್ತ ಮತ್ತೆ ಹರಿಯದಂತೆ ತಡೆದು
ಹೊಸಾ ಜೀವನ ರೋಪಿಸಬೇಕಿದೆ, ಪ್ರಧಾನಿ ಕೆಲಸ
ಹಳೇ ರಾಟಿ ತುಕ್ಕು ಹಿಡಿದಿದೆ ಎಂದು
ಹಾಗೆ ಹೊರಹಾಕದಿರಿ ಇದ್ದ ಸ್ಥಿತಿಯಲ್ಲೇ ಅದನ್ನ
ಹೊಸಾ ಅಮ್ಮ ಬರಲಾರಳು ಒಮ್ಮೆ ಹೊರಹಾಕಿದರೆ
ಹೆಮ್ಮೆಯಿಂದ ರಕ್ಷಿಸಿ ಅವಳು ರಕ್ಷಿಸುವಂತೆ ನಿಮ್ಮನ್ನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ