ಕಾಣುವ ಕಡಲಲಿ ಮಿಂದು ಹೋಗಿದೆ ಮನ .
ಕಾಣುವ ಕಡಲಲಿ ಮಿಂದು ಹೋಗಿದೆ ಮನ
ನೋಡುತ್ತಿರುವೆ ಕನ್ನಡ-ಕದಲಿ ನಾ
ಅಲೆಗಳು ಕಾಡುತ್ತಿವೆ ನನ್ನ ಈ ಕ್ಷಣ
ಮುಳುಗುವ ಸೂರ್ಯನ ಕೆಂಪಿನ ಕಿರಣಾ
ಮೋಡದೊಳಗಿಂದಾ ಇಣುಕುತಿದೆ
ಚಿನ್ನದ ಅಂಚಿನ ಕಡಲಿನ ತುದಿಯಲಿ
ಅರ್ಧ ಮುಳುಗಿ ಮೊಗ ತೋರುತಿದೆ
ಎಲ್ಲಿಗೆ ಹೊರಟಿರುವನೋ ರವಿ ಏನಿದೆಯೋ ಅಲ್ಲಿ --1
ನೋಡಬೇಕು ಅಲ್ಲಿ ಇರುವುದನ್ನ
ಆ ಸೊಬಗನೂ ಸವಿಯಬೇಕು ಆದರೆ ಒಂದು ಕ್ಷಣ
ವರುಷ ಕಳೆದರೂ, ಮುಳುಗುವ ಸೂರ್ಯನ
ಇರಳು ವಿಭಿನ್ನವಾಗಿದೆಯಂತೆ
ಏರಿಳಿತ ತುಂಬಿದ ಮನಸಿನ ಭಾವನೆ
ಬಿಂಬಿಸಿದಂತೆ ನೆರೆಳು ತೋರುತಿದೆ
ಯಾರಿರುವರೋ ಒಳಗೆ, ಏನುಸಿಗುವುದೋ ಕೆಳಗೆ --2
ಇಳಿಯಬೇಕು, ರವಿ ಇಳಿಯುವ ಮುನ್ನ
ಸೊಬಗನೂ, ಹಿಡಿಯಬೇಕು ಇರುಳಲ್ಲಿ ಆ ಕ್ಷಣ
ಹುಣ್ಣಿಮೆ ಚಂದಿರನು ಹೋಗುವ ಅಲ್ಲಿ
ಸಣ್ಣವನಾಗಿ ಬರುತ್ತಾನೋ
ರವಿ ಚಂದ್ರನ, ರವಿಯು ಚಂದ್ರನಾ, ರವಿಚಂದಿರನಾ
ದೇವರು ನಿತ್ಯ ನಿಯಂತ್ರಿಸುವವನೇನೊ --3
ನಿಯಂತ್ರಿಸುವವರಾರೋ, ಮಾವನ ಮನೆ ಅಲ್ಲಿ ಇದೆಯೇನೋ?
ಅರಿಯಬೇಕು ನಾನು, ಸೊಬಗನು ಬರಿಯಬೇಕು ನಾನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ