ಪಚ್ಛೆ ತುಂಬಿದ ನಡು ಬೈತಲು ಪದಕ ಹೇಳುತಿದೆ
ಬೆಚ್ಚನೆಯ ನೋಟಕ್ಕೆ ಜಾರಿಬಿಡುವ ಭಯಾನನಗೆ
ಹಚ್ಚಿದಾ ಗುಲಾಬಿ ತುಟಿಬಣ್ಣ ಮಿಂಚಿ ಮುನುಗುತಿದೆ
ಕಚ್ಚಿ ಮುದ್ದಾಡಲು ಹುಟ್ಟಿದ ಅದೃಷ್ಟದವನಾರೇ
ಹೊಚ್ಚ ಹೊಸಾ ತಿಳಿನೀಲಿ ಬಣ್ಣದ ರೇಷ್ಮೆ ಸೀರೆ
ಚುಚ್ಚುತ್ತಿಹುದೇನೋ ಕಚಗುಳಿ ಒಳಗೊಳಗೇ
ಹುಚ್ಚು ಹಿಡಿಸುತಿದೆ ಈ ನಿನ್ನ ಮಧುರ ಮುಗುಳ್ನಗೆ
ಮುಚ್ಚಿದಾ ರೆಪ್ಪೆಯಲಿ ನೀ ಕಂಡ ಮನ್ಮಥನಾರೇ
ಬಿಚ್ಚಿ ಮುಂಗುರುಳುಗಳು ನಯವಾಗಿ ಹಾರಿವೆ
ಬಚ್ಚಿಡಲೇ ಈ ಚಲುವೆಯನ್ನ ನನ್ನ ಎದೆಯೊಳಗೆ
ಗುಚ್ಛಹರಳಿನಾ ಕಿವಿಯೋಲೆ ನವಿರಾಗಿ ಸೆಳೆಯುತಿದೆ
ಮೆಚ್ಚಿ ಮನಸೋತೆ ಪ್ರೀತಿಸುವೆ, ಒಪ್ಪಿ ಪ್ರೀತಿಸು ಬಾರೆ!