ಯಾವ ಹಾಡು ಹಾಡಲಿಲ್ಲಿ
ಹಸಿರ ತಾಯಿ ಮಡಿಲಲಿ .. ಪ
ಹಸಿರ ತಾಯಿ ಮಡಿಲಲಿ .. ಪ
ಹೊಸತು ಏನೋ ಕನಸು ಕಾಣೋ
ಮನಸು ಮೂಡಿದ ಕ್ಷಣದಲಿ -- ಅ ಪ
ಹಸಿರ ಹಾಸಿನ ಬೆಟ್ಟಸಾಲು ಗಗನ ಚುಂಬಿಸುವಂತಿದೆ
ಹರಿವ ತೊರೆಯು ಸರಸ ಸ್ವರ ಸಂಗೀತ ಹಾಡಿದಂತಿದೆ
ಮೋಡಸೀಳಿ ಸೂರ್ಯ ರಶ್ಮಿ, ಭುವಿಯ ಮುತ್ತಿಕ್ಕಿದಂತಿದೆ
ಹೊಸತು ಭಾವ ಬೆರೆತು ಜೀವ ರಸಿಕರಾಗುವಂತಿದೆ
ಹೊಸತು ಭಾವ ಬೆರೆತು ಜೀವ ರಸಿಕರಾಗುವಂತಿದೆ
ಕಾಡು, ನಾಡ ಜನರ ಸೆಳೆದು ಪ್ರೀತಿ ರಸವ ಚಲ್ಲಿದೆ,
ಹಸಿರ ಸೊಗಸು ಕಣ್ಣಿತುಂಬಿ , ಬಾಹು ತಾನೇ ತೆರೆದಿವೆ!
ತಂಪು ಗಾಳಿ ದೇಹ ಸೋಕಿ ಮನದ ಮೊಗ್ಗು ಅರಳಿದೆ
ಬಣ್ಣ ಬಿಲ್ಲು ಮಿಂಚಿನೊಂದಿಗೆ ಬೆಳಕ ತೋರಣ ಕಟ್ಟಿವೆ
ಆಕಾಶದೆತ್ತರಕ್ಕೆ ಹಾರಿ ಮೋಡ ಹಿಡಿಯುವಂತಾಗಿದೆ
ಭಾವ ತುಂಬಿದ ಹಾಡು ಹಾಡಿ ನಿನ್ನ ಮಡಿಲ ಸೇರಬೇಕಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ