ತಾವರೆ ಎಲೆಗಳು
ತೇಲುತ ನಿಂತಿವೆ
ತೊರೆ ಕೆರೆ ಅಂಗಳದಿ
ತರು ಲತೆ ಬಳ್ಳಿಯು
ತೆಳ್ಳಗೆ ಸಮ ಹರಡಿದೆ
ತೀರಕೆ ತುಸು ದೂರದಲಿ
ತುಂತುರು ಹನಿಯ
ತಿಳಿ ಕೊಳ ಕೆಂದಾವರೆ
ತೋಟವು ಮನ ಸೆಳೆಯುತಲಿ
ತಾ ನಗುತಾ ಬಂದಳು
ತಾವರೆ ಬೇಕೇ ಬೇಕೆಂದಳು
ತಂದೆನು ಇಳಿದು ಕೆಸರಿನಲಿ
ತುರುಬಲಿ ಹೂ ಮುಡಿಸಲು
ತಬ್ಬಿ ನನ್ನವ ಎಂದಳು
ತುಸು ಮೋಹವು ಉಕ್ಕುತಲಿ
ತಂಗಾಳಿಯು ಬೀಸಿತು
ತಂಪನು ಸುರಿಸಿತು
ತನು ಮನು ಒಂದಾಗುತಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ