ಹೆರಳಿನ ಮಧ್ಯದ ಕುಂಕುಮ ಚಂದ
ಹಣೆಯ ಮಧ್ಯದ ಬಿಂದಿಯು ಚಂದ್ರ
ಹೊಳೆವ ತುಟಿಯ ಕೆಂಪಿನ ಅಂದ
ಹೊಸ ಸೀರೆ ಸೆರಗಿದೆ ಕೆಂಬಣ್ಣದಿಂದ
ಹುಬ್ಬು ಡೊಂಕಾಗಿದೆ ಬೀದಿಗೆ ಚಂದ್ರ
ಹೆರಳಿಲ್ಲದ ಮುಂಗುರುಳ ಮುಖಾರವಿಂದ
ಹಳದಿ ಲೋಹ ಆವರಿಸಿ ಮೊಗತುಂಬಾ
ಹಿತವಾಗಿ ಮುಚ್ಚಿದೆ ರೆಪ್ಪೆ ನಾಚಿಕೆಯಿಂದ
ಹೆಣ್ಣೆನುವೆ ನಾನು ತುಸು ಗರ್ವದಿಂದ
ಹಣ್ಣು ದೊರೆಯದು ಹೊಗಳಿಕೆಯಿಂದ
ಹಲವು ರೀತಿ ಗೆಲ್ಲು ನನ್ನ ಪ್ರೀತಿಯಿಂದ
ಹಗಲಿರಿಳು ಜೊತೆಇರುವ ಆನಂದದಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ