ಖುಷಿಯಾಗಿದೆ ಪತ್ರವ ನೋಡಿ
ಹುಸಿ ಇಲ್ಲದ ಕಿರುನಗೆಯು ಮೂಡಿ
ರಸಿಕತೆಯ ಆ ದಿನಗಳು ಕಾಡಿ
ಬಿಸಿಯಾಗಿದೆ ಮೈ ಏನು ಮಾಡ್ಲಿ
ಹಸಿರು ತುಂಬಿದ ತೋಟಕೆ ಹೋಗಿ
ಉಸಿರು ಉಸಿರಲಿ ಬೆರೆತೆ ನನಗಾಗಿ
ಬೆಸೆತು ಹೃದಯಗಳ ಸೊಗಸಾಗಿ
ಹೊಸತು ಹಾಡನು ಹಾಡಿದೆ ಹಿತವಾಗಿ
ತಾಸಿಗೊಂದು ಈ ನೆನಪಿನ ಪತ್ರ
ವಾಸಿ ಮಾಡುತಿದೆ ಹಳೆ ಗಾಯ ಮಿತ್ರ
ತುಸು ಯೋಚಿಸದೆ ಬಂದ್ಬಿಡು ಹತ್ರ
ವಾಸ ಮಾಡುವ ನಲಿಯುತ ಸರ್ವತ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ