ಭಾನುವಾರ, ಅಕ್ಟೋಬರ್ 19, 2014

ಗಿಳಿಯೇ

ಚಂದದ ಗಿಳಿಯೇ ಬಾರೋ 
ಮುದ್ದಾದ ಹಾಡು ಹಾಡೋ 
ಹಚ್ಚ ಹಸಿರ ರೆಕ್ಕೆ ಬಿಚ್ಚಿ 
ಹೊಸ ಉಲ್ಲಾಸ ತಾರೋ ...
 
ಮಾವಿನ ಮರವ ಹುಡುಕಿ 
ಮಾಗಿದ ಕಾಯಿ ಕಚ್ಚೋ 
ದಾಳಿಂಬೆ ತೋಟಕೆ ನುಗ್ಗಿ 
ಸಿಹಿ ಹಣ್ಣಿಗೆ  ಧಾಳಿ ಮಾಡೋ 

ಹಣ್ಣಿನ ರುಚಿಯನ್ನ ಸವಿದು 
ಉಳಿದ ಗಿಳಿಗಳ ಕರಿಯೋ 
ಚಿಲಿಪಿಲಿ ಗುಟ್ಟುತ ಹಾರಿ 
ಮರಿ ಗಿಳಿಗೆ ಗುಟುಕು ನೀಡೋ 

ಹಸಿರಎಲೆ ಹಿಂದೆ ಕುಳಿತು 
ಕಣ್ಣು ಮುಚ್ಚಾಲೆ ಆಡೋ 
ರೆಂಬೆ ರೆಂಬೆ ಹಾರುತ  
ಮುದ್ದು ಮಾಡುತ ಕೂರೋ 

1 ಕಾಮೆಂಟ್‌:

  1. ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು...
    ಗಂಧದ ಗುಡಿ ನೆನೆಪಿಸಿಬಿಟ್ಟ್ಇರಿ.

    shared at:
    https://www.facebook.com/groups/191375717613653?view=permalink&id=435285689889320

    ಪ್ರತ್ಯುತ್ತರಅಳಿಸಿ