ತುಂಟ ಮನಸಿನ ಹುಚ್ಚು ಕನಸುಗಳು
ಬುಧವಾರ, ಅಕ್ಟೋಬರ್ 29, 2014
ಹಚ್ಚೋಣ ದೀಪ
ಪ್ರಣತಿ ಎಣ್ಣೆಯ ಒಡಲು
ಪ್ರೀತಿ ತುಂಬಿದ ಕಡಲು
ಬೆಳಗುತಿರಲಿ ದೀಪ ಹಗಲು ಇರಿಳು
ದ್ವೇಷ ಅಸೂಯೆ ಬದಲು
ಮನಸ ಕೊಳೆಯನು ತೊಳೆದು
ಬೆಳಗಿಸುವ ಸ್ನೇಹ ಸುರಿಸಿ ಸೊಗಸು
ಓಡಿಸಿ ಅಜ್ಞಾನದ ಕತ್ತಲು
ಹಚ್ಚೋಣ ದೀಪ ಸುತ್ತಲು
ಬೆಳಗುರಿತಲಿ ಜ್ಞಾನ ಹರಿಸಿ ಹೊನಲು
ಭಾನುವಾರ, ಅಕ್ಟೋಬರ್ 19, 2014
ಗಿಳಿಯೇ
ಚಂದದ ಗಿಳಿಯೇ ಬಾರೋ
ಮುದ್ದಾದ ಹಾಡು ಹಾಡೋ
ಹಚ್ಚ ಹಸಿರ ರೆಕ್ಕೆ ಬಿಚ್ಚಿ
ಹೊಸ ಉಲ್ಲಾಸ ತಾರೋ ...
ಮಾವಿನ ಮರವ ಹುಡುಕಿ
ಮಾಗಿದ ಕಾಯಿ ಕಚ್ಚೋ
ದಾಳಿಂಬೆ ತೋಟಕೆ ನುಗ್ಗಿ
ಸಿಹಿ ಹಣ್ಣಿಗೆ ಧಾಳಿ ಮಾಡೋ
ಹಣ್ಣಿನ ರುಚಿಯನ್ನ ಸವಿದು
ಉಳಿದ ಗಿಳಿಗಳ ಕರಿಯೋ
ಚಿಲಿಪಿಲಿ ಗುಟ್ಟುತ ಹಾರಿ
ಮರಿ ಗಿಳಿಗೆ ಗುಟುಕು ನೀಡೋ
ಹಸಿರಎಲೆ ಹಿಂದೆ ಕುಳಿತು
ಕಣ್ಣು ಮುಚ್ಚಾಲೆ ಆಡೋ
ರೆಂಬೆ ರೆಂಬೆ ಹಾರುತ
ಮುದ್ದು ಮಾಡುತ ಕೂರೋ
ಮಂಗಳವಾರ, ಅಕ್ಟೋಬರ್ 14, 2014
ವಸುಧೆ
ಹರನು ಜಡೆ ಸರಸಿ
ಹರಿಯಬಿಟ್ಟ ಭಾಗಿರಥಿಯೋ
ಹಸಿರ ಸೀರೆಯನುಟ್ಟು
ಹಸಿಹಾಲು ಸುರಿಸೋ ಗಂಗೆಯೋ
ವಸುಧೆಯೋಳಗಿನ
ರಸಿಕ ಲೋಕದ ಒಡಲೊ
ಹಸನಾದ ನಿತ್ಯ ಕಾನನದ
ಹೊಸತಾದ ಝುಳು ಲಹರಿಯೋ
ಉಸಿರಿಗೆ ಮೋಹ ತರುವ
ವಸುಗೆಯಾಗದ ಮಾಯಾಂಗನೆಯೊ
ಪಿಸುಮಾತಿಗೆ ಶರಣಾದ
ಹಸಿರು ತುಂಬಿದ ನವ ವಧುವೋ
ಹಸಿವ ಮರೆಸಿ ಮುದನೀಡುವ
ಹೊಸರೂಪದ ಮೃಷ್ಟಾನ್ನವೋ
ಕವಿಗಳಿಗೆ ಸ್ಪೂರ್ತಿ ತುಂಬೋ
ನವಿರಾದ ಜೀವ ಜಲಪಾತವೋ
ಬಸವಳಿದು ಹೋಗಿರುವೆ ನಾ
ನುಸುಳದಾಗಿವೆ ಪದಗಳು ಚೆಲುವ ವರ್ಣಿಸಲು !!
(ಚಿತ್ರಕ್ಕಾಗಿ ಬರೆದ ಕವನ )
ಶುಕ್ರವಾರ, ಅಕ್ಟೋಬರ್ 10, 2014
ಬರಗಾಲ
ನಲ್ಲನ ಪ್ರೀತಿಯ ಸಂದೇಶ
ಬಂದರಾಗಲೇ ವಸಂತಕಾಲ
ಚಲ್ಲಿ ಅರಳಿದ ಗುಲಾಬಿ ಹೂವು
ಕಿರುನಗೆಯಬೀರಿದಾಗಲೇ ಮಳೆಗಾಲ
ನಲ್ಲೆ ಪ್ರೀತಿ ಕಣ್ಣಲ್ಲಿ ನೋಡಿ ಒಪ್ಪಿ
ಅಪ್ಪಿಕೊಂಡರಾಗಲೇ ಚಳಿಗಾಲ
ವಲ್ಲೆ ನಿನ್ನ ಸಹವಾಸ ಎಂದು
ಮುನಿಸಿಕೊಂಡಾಗಲೇ ಬೇಸಿಗೆಕಾಲ
ಬೆಲ್ಲ ಕಡಲೆ ತಾಳಿ ಒಣಕೊಬ್ಬರಿ
ಜೊತೆಇಟ್ಟಾಗಲೇ ಮುಹೂರ್ತಕಾಲ
ಇಲ್ಲವಾದರೆ ಜೀವನ ಪೂರ್ತಿ
ಕಂಡು ಕೇಳರಿಯದಾ ಬರಗಾಲ .. ಬರಗಾಲ !!
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)