ಅಂಬರದಿಂದ ಇಳಿದು ಬಂದಿರುವ
--ನೀಲಾಂಬರಿ ನೀನೆ ನಾ
ಚುಂಬಕ ಮೋಹಕ ಕಣ್ಣುಗಳರಳಿಸಿ
-- ನೋಡುತಿರುವೆ ನೀ ಏನನ್ನ
ಬೊಂಬೆಯ ತರದಿ ತಿಡಿದ ಮುಖವಿದು
-- ಬೊಮ್ಮನ ಸೃಷ್ಟಿಯು ನೀನೆ ನಾ
ಇಂಬು ಕೂಡುವಂತ ನಿನ್ನಯ ರೂಪಕೆ
-ಮನಸೋತು ಕೊಡಲಿ ನಾ ಏನನ್ನ
ಕೊಂಬೆಯು ನಗುತಿದೆ ಸುಂದರಿ ಸ್ಪರ್ಶಕೆ
---ನಗುವಲ್ಲಿಯ ಮದಿರೆ ನೀನೆ ನಾ
ರಂಭೆಯ ಹೋಲುವ ನಿನ್ನಯ ಅಂದಕೆ
-- ತೊಡಿಸಲೇ ಬಂಗಾರದ ಸರವನ್ನ
ದುಂಬಿಯು ಹಾಡುತ ಹತ್ತಿರ ಬರುತಿದೆ
-- ಜೇನಿನ ಹನಿಯು ನೀನೆ ನಾ
ಬಿಂಬವು ಮೂಡಲು ನನ್ನಯ ಮನಸಲಿ
--ಗೀಚಿದೆ ಕವನದ ಸಾಲೊಂದನ್ನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ