ಶುಕ್ರವಾರ, ಅಕ್ಟೋಬರ್ 25, 2013

ಮೆಲ್ಲಗೆ

ಹುಡುಗಿ ಹುಡುಗಿ ನನ್ನ 
ಬೆಡಗಿ ತಿರುಗಿ ತಿರುಗಿ ನೋಡು 
ಹುದುಗ ಹುಡುಗ ನೀನು 
ಗಿಡುಗ ಹಿಂದೆ ಬರದೆ  ಓಡು   ।। ಪ ।। 

ಕಣ್ಣಲ್ಲಿ ಕಣ್ಣಿಟ್ಟು ನೋಡು  
ಕೋತಿ ಮುಖಕ್ಕೆ ಅದು ಕೇಡು 
ನಿನ್ನ ಹಿಂದೆ ನಾನು  ಬಂದ್ರೆ 
ಏಳ್ಕೊಬೇಡ  ಸುಮ್ನೆ ತೊಂದ್ರೆ    ೧ 

ಕೈ ಕೈ ಹಿಡಿದು  ನೃತ್ಯ ಮಾಡು 
ನಿನ್ ಮೈ ನೆಟ್ಟಗೆಇದೇನಾ ನೋಡು 
ನಿನ್ನ ಮೇಲೊಂದು ಪ್ರೇತಿ ಹಾಡು 
ಆ ಧ್ವನಿಗೆ ಆಯಿತು ಕಿವಿ ಕಿವುಡು     ೨ 

ಹೂವು ಕೊಟ್ಟರೆ ಏನು ಮಾಡುವೆ 
ತುಳುದು ಹಾಕಿ ನಿನ್ನ ಕಾಡುವೆ 
ನಿನ್ನೇ  ಪ್ರೀತಿ ಮಾಡಿ ಗೆಲ್ಲುವೆ . 
ಕನಸು ಕಾಣೋದು ಬಿಡು  ಮೆಲ್ಲಗೆ ..  

ಭಾನುವಾರ, ಅಕ್ಟೋಬರ್ 20, 2013

ಗೆಳೆಯ

ಇರುವನು ಜೊತೆಯಲ್ಲಿ ಇದ್ದರು ಇರದಂತೆ 
ತರುವನು ನಗುವನು ಲತೆಯೇ ನಾಚುವಂತೆ  

ಎಳೆಯ ಚಿಗುರಿನಲಿ ಹೊಳೆವ ಇಬ್ಬನಿಯಂತೆ
ಬಿಳಿಯ ವಜ್ರದಲಿರುವ ಚಲುವ ಬಣ್ಣಗಳಂತೆ   
ಬೆಳಗುವ ದೀಪದಲಿ ತಿಳಿ ಎಣ್ಣೆ ಇದ್ದಂತೆ  
ಗೆಳೆಯ ನೀ ಇರುವೆ  ಚಂದಿರನ ಬೆಳಕಂತೆ 

ನೀರಿನಲಿ ತೇಲುವ ಕಮಲದೆಲೆಯಂತೆ ಸಾ-
ಗರದೊಳಗೆ ಹುದುಗಿದ ರತ್ನ ಪರ್ವತದಂತೆ 
ಹೂರಣದಲಿ ಸಿಹಿಯಾದ ಬೆಲ್ಲ ಬೆರೆತಂತೆ   
ಇರುವೆ ನೀ ಗೆಳೆಯ ಎಲೆಮರೆ ಕಾಯಂತೆ

ಮಳೆಗಾಲದಲಿ ಸಿಗುವ ಆಸರೆಯ ಮರದಂತೆ 
ಚಳಿಗಾಲದಲಿ ಹೋದೆವ ಕರಿ ಕಂಬಳಿಯಂತೆ 
ಬಳಲಿದ ಬೇಸಿಗೆಯಲ್ಲಿ ಬರುವೆ ತಂಗಾಳಿಯಂತೆ 
ಗೆಳೆಯ ನೀ ಇರುವೆ  ಚುಲುಮೆಯ ಸೆಲೆಯಂತೆ 
--ಜೀವನ ಜ್ಯೋತಿಯಂತೆ