ಮಂಗಳವಾರ, ಜನವರಿ 29, 2013

ನೀನಾರೋ

ಹಿತವಾದ ಬೆಳಕಲ್ಲಿ  ಸುಳಿವ ತಂಗಾಳಿಯಲಿ
ನಕ್ಷತ್ರದಂತೆ ಹೊಳೆವವ  ನೀನಾರು ?

ಬೆಚ್ಚಗಿನ ಹೊದಿಕೆಯಲಿ ಅವಿತು
ಕಿಟಿಕಿಯ ಬಳಿ  ಇಣಿಕಿ ಕದ್ದು ನೋಡುವವ ನೀನಾರು

ಕಾಮನ ಬಿಲ್ಲಿನಲಿ ಮಲ್ಲಿಗೆ ಹೂ ಬಿಟ್ಟು 
ಹೃದಯಕೆ ಗುರಿಇಟ್ಟು  ಹೊಡೆದವ  ನೀನಾರು
ರತಿಯು ನಾಚುವಂತೆ ನಾಚಿಕೆಯು
ಬರುತಿಹುದು ಅದನೋಡಿ ನಗುತಿರುವವ  ನೀನಾರು

ದೂರದಲಿ ನಿಂದು ಹಾರುವ ಮುತ್ತನ್ನು
ಕೊಟ್ಟು  ಮೈ ಬಿಸಿ ಏರಿಸುತಿರುವವ ನೀನಾರು
ಹುಣ್ಣಿಮೆ ರಾತ್ರಿಯಲಿ ಆಸೆಗಳ ಉಕ್ಕಿಸಿ
 ಸೇರೆಯಿಡಿಯಲು  ಬಂದವ  ನೀನಾರು

ಹೃದಯಕ್ಕೆ ತಂತಿಯ ಬಿಗಿದು ಪ್ರೀತಿರಾಗವ
ನುಡಿಸಿ ನನಗಾಗಿ ಮಿಡಿಯುವವ ನೀನಾರು  
 
ಎಲ್ಲಿ ನೋಡಿದರಲ್ಲಿ ನಿನ್ನದೇ ನೆನಪಾಗುವುದು
ಚಂದಿರನಲಿ ಅವಿತಿರುವವನೆ ನೀನಾರೋ

ಪ್ರೀತಿಸುವ ದಿನದಂದು ಬಿಳಿಯ ಉಡುಗೆಯ
 ಉಟ್ಟು ಕೆಂಗುಲಾಬಿ ಇಟ್ಟವನು ನೀನಾರೋ
ನೀ ಇಟ್ಟ  ಗುಲಾಬಿಯ ಮುಡಿದು ಎದುರಿಗೆ
ಬಂದರೋ  ಅರಿಯದೆ ಹೋಯಿತೆ ನಾನ್ಯಾರೋ

ಮಂಗಳವಾರ, ಜನವರಿ 22, 2013

ನೆನಪಾಯಿತು

ದೂರದ ಉರಿನಲ್ಲಿ ಹಿಮದ ಆ ಮಳೆಯಲಿ
ಛಳಿಯ ಆ ಗಾಳಿಗೆ ನಿನ್ನ ನೆನಪಾಯಿತು

ಮೋಡಗಳ ಮರೆಯಲಿ ಬೆಳ್ಳಿ ಅರಮನೆಯೊಂದು
ನೋಡ ನೋಡುತ್ತಲೇ ಅನಾವರಣವಾಯಿತು 
ಮುಂಜಾವಿನ ಗಾಳಿಯ ಮಹಡಿಯ ಕಿತಿಕಿಯಲಿ
ನಿನ್ನ ಮುಂಗುರುಳು ಹಾರುತ್ತ ನನ್ನ ಕರಿತಿತ್ತು

ಉದಯಿಸಿದ ಸೂರ್ಯನ ಕಿರಣಗಳು ಬಿದ್ದಂತೆ
ನಿನ್ನ ಕಣ್ಣುಗಳು ಬಿಡದಂತೆ ನನ್ನ ನೋಡುತ್ತಿತ್ತು
ನೀ ಬರೆದು ಕೊಟ್ಟ ಪತ್ರವ ಹಿಡಿದ ಹಂಸವೊಂದು
ಹಾರುತ್ತ ಹಾರುತ್ತ  ನನ್ನಕಡೆ ಬಂದಂತೆ ಆಯಿತು 

ನಿನ್ನೊಲುಮೆ ಅರಮನೆಗೆ  ಪ್ರೀತಿಯ ಸೆರೆಮನೆಗೆ
ಭಂದಿಸಿ ಕರೆತರುವಂತೆ  ಪತ್ರದಲಿ ಬರೆದಿತ್ತು
ಹೆಗಲಲಿ  ಕೂರಿಸಿಕೊಂಡು ತೇಲುತಾ  ಸಾಗಿದ ಹಂಸ
ನಿನ್ನ ಹೃದಯದಾ ಅರಮನೆಗೆ ಸೇರಿದಂತಾಯಿತು

ಒಲವಿಂದ ನೀ ಬಂದುದೂರದಿಂದಲೇ ನಿಂತು  
ಚುಂಬಿಸಿದಾಗ ಮೈ ಬೆವರಿ ನೀರಾಯಿತು 
ಬಂದಿಯಾಗಿರುವೆ  ಒಳಗೆ ಬಳಿಬಂದು ಬೀಗ ತೆಗೆ 
ತೆಗೆದಾಗ ಬಾಗಿಲು ಮಂಚದಿಂದ ಬಿದ್ದಂತಾಯಿತು