ಶನಿವಾರ, ಡಿಸೆಂಬರ್ 15, 2012

ಹಿಮದ ಮಳೆ

ಸುರಿಯುತಿದೆ ಹಿಮದ ಮಳೆ
ಹೆಪ್ಪು ಗಟ್ಟಿದ   ಹುಚ್ಚು ಹೊಳೆ
ಎಲ್ಲಿ ನೋಡಿದರು ಬೆಳುಪು ಚಂದಿರನ ನೆಲದಂತೆ
ಹತ್ತು ದಿಕ್ಕಲು ಹಾಲು ಹನಿ ಹನಿಯಾಗಿ  ಸುರಿದಂತೆ
ದೇವ ಲೋಕವೇ ಧರೆಗೆ ಇಳಿದಂತೆ

ಹಗಲಿಲ್ಲ ಇರುಲಿಲ್ಲ
ಸೂರ್ಯ ಕಾಣುವುದೇಇಲ್ಲ
ಎಲ್ಲಿ ನೋಡಿದರು ಮೌನವೇ ತುಂಬಿದಾ ಮನೆಯಂತೆ 
ಹತ್ತು ದಿಕ್ಕಲು ಬೆಟ್ಟ ನಿಂತಿವೆ ಮೂಕ ಪ್ರೆಕ್ಷಕರಂತೆ
ಸದ್ದಿಲ್ಲದಾ  ಲೋಕ ಧರೆಗೆ ಇಳಿದಂತೆ

ಗುಡುಗಿನ ಸುಳಿವಿಲ್ಲ
ಮಿಂಚು ಮೂಡುವುದಿಲ್ಲ
ಎಲ್ಲಿ ನೋಡಿದರು ತೇಲುತಿವೆ ಮೋಡಗಳು ಹತ್ತಿಯಂತೆ
ಹತ್ತು ದಿಕ್ಕಲು ಚಳಿಯು ತೋರಿ ಹಾರಿ ಬಂದಂತೆ
ಪ್ರೇಮ ಲೋಕವೆ ಧರೆಗೆ ಇಳಿದಂತೆ

ಭಾನುವಾರ, ಡಿಸೆಂಬರ್ 9, 2012

ಅಪ್ಪುಗೆ

ಹರಿವ ನದಿ ಅಂಚಲಿ
ಬೀಸೋ ತಂಗಾಳಿಯಲಿ
ನಿನ್ನ ಜೊತೆ ನೆಡೆವಾಸೆ
ಮಂಜು ಹಿಮ ತುಂಬಿದ
ತುದಿಯಲಿ ನಲಿದಾಡುತ
ನಿನ್ನ ಕಾಣಲು ನಾ ಕುಳಿತೆ
ಪಿಸು ಪಿಸು ಮಾತಿಗೆ
ಮೊಗದಲಿ ಗುಳಿ ಬಿಳುತ್ತೆ
ಅದ ನೋಡುಲು ನಾ ಬರುವೆ
ತಿರುಗಿ ನಗುವ ನೋಟಕೆ
ಹಾರುವ ಮುತ್ತೊಂದ ಕೊಟ್ಟೆ
ನಿನ್ನ ನಾಚಿಕೆಗೆ ಮರುಳಾದೆ
ತುಂಟ ತುಟಿ ಅಂಚಿಗೆ
ಜೀನ ಹನಿಯೊಂದಿದೆ
ಅದ ಸವಿಯಲು ನಾ ಸೋತೆ
ಬರಲು ನಿನ್ನ ಸನಿಹಕೆ
ಕೊಡುವೆ ಮೃದು ಅಪ್ಪುಗೆ
ಬಿಸಿ ಅನುಭವ ಹೇಳಲಾರೆ
ಇದು ಯಾಕೋ ಹೀಗೆ ಆಸೆ
ನೀನು ದೂರ ಹೋದ ಮೇಲೆ
ನಿನ್ನ ಬರುವಿಕೆಗೆ ನಾ ಕಾಯುವೆ

ಗುರುವಾರ, ಡಿಸೆಂಬರ್ 6, 2012

ಹೆಜ್ಜೆ ಇಡುತ

ಬಾರೆ ಬಾರೆ ಪ್ರೀತಿಯ ಚುಳುಮೆಯ
ತುಂಬಿದ ಹೃದಯವ ಸೇರುತ    [ ಪ ]
ತೋರೆ ನೀರೆ ನಿನ್ನಯ ಮೊಗವನು
ಆದರದಿಂದ ಬಾ ನಗು ನಗುತ  [ಅ ಪ ]
 
ಹಲವು ತಳಿಯ ಹೂ ಬಣ್ಣದ ತೋಟದ 
ಒಳಗೆ ನಡೆ ನೀ ಮೃದುವಾದ ಹೆಜ್ಜೆ ಇಡುತ  
ಮಕರಂದವನು ದುಂಬಿಯು ಹೀರಿದಂತೆ
ಬರುವೆ ನೀ ಇರುವಲ್ಲಿಗೆ ಕನಸು ಕಾಣುತ 

 ನೀಲಿ ಬಾನಿನಂತೆ ಬೆಳಕು ತುಂಬಿದ ಕೆರೆಯಲಿ
ಕುಳಿತಿರುವೆ ನಿನಗಾಗಿ ಸಂಜೆ  ಕಾಯುತ 
ಮುಳುಗೋ ಸೂರ್ಯನ ಬಿಂಬದ ನೆರಳಲಿ  
ಪ್ರತಿಬಿಂಬದವು ನಗುತಿದೆ ನಿನ್ನನ್ನೇ  ಹೋಲುತ

ಮಂಜು ಮಿಶ್ರಿತ ಸುಂದರ  ಮಳೆಯಲಿ
ಓದುವೆ ಏಕೆ  ಹಿಂದೆ ಮುಂದೆ ನೋಡುತ
ಬೀಸುವ ಗಾಳಿಗೆ  ಸೂನೆಯ ಮಳೆಯಲಿ
ಚಳಿಯನು ತೊಡೆಯಲು ಬಾ ಅಪ್ಪುತಾ

ಅನಿಸುತಿದೆ

ನೀ ಇಲ್ಲೇ ಇರುವೆ ಎಂದು
ನನಗೀಗ ಅನಿಸುತಿದೆ
ನಾ ಎಲ್ಲೇ ಹೋದರು ಇಂದು
ನಿನ್ನ ನೆರಳೇ ಕಾಣುತಿಹೆ
ತುಂತುರು ಮಳೆ ಬಿಸಿಲಿನಲಿ
ತುಂಟಾಟ ಆಡುತಿದೆ
ನಿನ್ನ ಪ್ರೀತಿಯ ಸಿಂಚನದಲ್ಲಿ
ಕನಸೊಂದು ಬೀಳುತಿದೆ
ಉಲ್ಲಾಸದ ಛಳಿಯ ತಂಗಾಳಿಯಲಿ
ನನ್ನ ಮನಸು ಹಾರಾದುತಿದೆ
ನಿನ್ನ ಒಲವನು ಇಲ್ಲಿಯೂ ಬಯಸುತಲಿ
ಹಾಡೊಂದನು ಗುನುಗುತಿಹೆ
ನಿನ್ನ ನೆನೆಯುತ ಗೀಚಿದ ಕವನವನು
ಓದುತ ಮಲಗಿರುವೆ
ಮಲಗಿದ ಮಂಚವು ನಲಿಯುತಲಿ
ನಿದಿರೆಯ ಓಡಿಸುತಲಿದೆ

ಅಂದದ ನಿನ್ನಯ ಮೊಗವು 
ಚಂದಿರನ ಹೋಲುತಿದೆ 
ಮಂದ ಬೆಳಕಲ್ಲಿ ಮುಂಚುವ ನೀ 
ಬಂದು ಬಳಕುತ್ತಾ ನನ್ನನು ಸೇರು