ಬುಧವಾರ, ಸೆಪ್ಟೆಂಬರ್ 28, 2011

ಜಾರಿ ಕುಳಿತೆ

ನೋಡುತಿರುವೆ ನಿನ್ನ ಕುಂಚದ ಚಿತ್ರವನ್ನ
ಕನಸಿಗೆ ಜಾರಿ ಕುಳಿತೆ ಮೀರಿ ಸಮಯವನ್ನ ...............
ಹೊಗಳಲು ಬಳಸುವೆ ಹೊಸ ಪದಗಳನ್ನ
ಹೋದ ಕಡೆಯಲ್ಲ ಹುಡುಕುವೆ ನಿನ್ನ ಕಣ್ಣ
ನೀನೆಂದು ಹಿಂದೆ ನೆಡೆದು ಹೋದೆ ಚಿನ್ನ
ತಿರುಗಿ ನೋಡಿ ಬೈದರು ಬೇಸರವಿಲ್ಲ ಇನ್ನ...
ನನ್ನೊಳಗೆ ನಾ ಕಾಣುತಿರುವೆ ನಿನ್ನ
ಹೊಡೆದಿರುವೆ ನೀ ನನ್ನ ಮನಸಿಗೆ ಕನ್ನ
ಹೃದಯದೊಳಗೆ ಬಚ್ಚಿ ಇಟ್ಟಿರುವೆ ನಿನ್ನ
ಮತ್ತೆ ಎದುರಿಗೆ ಬಂದರೆ ಒಮ್ಮೆ ಎಷ್ಟು ಚನ್ನ ....
ಹಾರುತಿದೆ ಸರಿಮಾಡಿಕೋ ದುಪ್ಪಟವನ್ನ
ಆ ಮಧುರ ತಂಗಾಳಿ ಸೂಕ್ಲಿ ನನ್ನ ಮೈಯನ್ನ
ಮುಂಗುರುಳು ನೋಡುತ ನಾ ಹಾಡುವೆ ಚಿನ್ನ
ಕಣ್ಣರಳಿಸಿ ನೋಡಿ ಒಂದು ನಗುಬೀರು ಇನ್ನ ......
ಹೃದಯ ಹಾಡುತಿದೆ ಕೊಡು ಪ್ರೀತಿಯನ್ನ
ಒಪ್ಪಿಸುವೆ ನಾ ನಿನ್ನ ಅಪ್ಪ ಅಮ್ಮನ ಚಿನ್ನ
ಸಮಯ ಮೀರುತಿದೆ ವರಿಸಲು ಬಾ ನನ್ನ
ತಿಳಿಹಸಿರ ಹಾಸಂತೆ ಸಾಗಿಸುವ ಜೀವನವನ್ನ ...

ಮಂಗಳವಾರ, ಸೆಪ್ಟೆಂಬರ್ 27, 2011

ನಲಿದಾಡು

ನಲಿದಾಡು ಬಾ ನಲ್ಲೆ
ಹೃದಯ ಕಪಾಟಿನ ಒಳಗೆ
ಅಪಧಮನಿ ಇಂದ ಹೂಕ್ಕು
ಅಭಿಧಮಿನಿ ಇಂದ ಹೊರ ನೆಡೆದು
ಹೊಸಚೈತನ್ಯ ತುಂಬುತಲಿ 1

ಹೋರಾಡು ಬಾ ಗೆಳತಿ
ಅತಿಸೂಕ್ಷ ಜನಗಳ ಜೊತೆಗೆ
ಪ್ರೀತಿ ಇಂದ ಬಳಿ ಬಂದು
ಮೋಹದಿಂದ ಹೊಡೆದೋಡಿಸಿ
ಆಯುರಾರೋಗ್ಯ ತುಂಬುತಲಿ 2

ಉಲ್ಲಸಗಳಿಸು ಬಾ ಚಲುವೆ
ಉಸಿರು ತಿಳಿಗೊಳಿಸಿ ಶ್ವಾಸ ಕೋಶದಲಿ
ಪಸರಿಸಿ ಆಮ್ಲಜನಕ ಅಣು ಕಣದ
ಉಂಗುಸ್ತದಿಂದ ನಡು ನೆತ್ತಿಯವರೆಗೆ
ನವಿರಾಗಿ ಮನಸು ನೀ ತುಂಬುತಲಿ 3

ಚುಚ್ಚಿದರೆ ನೀ ಹೊರ ಬರುವೆ
ನಗುತ ನೀ ಒಳಗೆ ಇರು ಒಲವೆ
ಬೆಳಕಿನ ಲೋಕವನ್ನು ಸೋಗಸಾಗಿಸಿ
ತೋರಿಸುವೆ ಹೊಸ ಅರಮನೆಯ
ಚಿತ್ತಾರದ ಕನಸು ತುಂಬುತಲಿ 4

ಕೊಬ್ಬಿ ನೀ ಹರಿಯದಿರು ವೇಗ
ಕಡಿಮೆ ಯಾಗುವುದು ರಹದಾರಿ
ಕುಜ್ಬ ವಾಗುವುದು ತಳಮದಲಿ
ನೆಡೆದು ಬಡಿತ ನಿಲ್ಲಿಸುವೆ
ನೀ ಎದೆಯ ಹೊರಗೆ ತುಂಬುತಲಿ 5

ನೀನಿಲ್ಲದೆ ಹೃದಯ ಬದಿಯಲಾರದು  ಲಯದಿ
ನೀನಿಲ್ಲದೆ ನರನಾಡಿ ಜೀವ ತಡಿಯಲಾರವು
ನೀನಿಲ್ಲದೆ ಉಸಿರು ಏರಿಳಿತ ವಾಗದು
ನೀನಿಲ್ಲದೆ ನನ್ನ ಕನಸು ನನಸಾಗದು
ನನಗುತ ಬಾ ಬಾಲೆ ನಮ್ಮ ಬದುಕು ತುಂಬುತಲಿ 6

ಎಳೆಯೋಣ ಬಾ

ಮರಭೂಮಿಯಲ್ಲಿ ಕಂಡ ನೀರಿನ ಒರತೆಯಂತೆ
ಬಂಜರು ನಾಡಲ್ಲಿ ಸಿಕ್ಕ ಗುಲಾಬಿ ಹೂ ಅಂತೆ
, ತೂಫಾನಿನಲಿ ಸಾಗುತಿರುವ ಹಡಗಿನಂತೆ ,
ಕತ್ತಲಲಿ ಬೆಳಗುವಾ ಬಾ ನಲ್ಲೇ ನಂದಾ ದೀಪದಂತೆ , 1

ನಡೆಯುತಿದ್ದ ದಾರಿಯಲಿ ಬಂದೆ ನೀ ಮಿಂಚಂತೆ
ನೀ ಕಂಡೆ ಹಸಿರುವನದಲ್ಲಿ ಹೊಸ ಚಿಲುಮೆಯಂತೆ
ಅರಿವಾಯಿತು ನನಗೆ ನೀ ನನಗಾಗಿ ಬಂದಂತೆ
ಇಷ್ಟು ದಿನ ಹುಡುಕಿದ್ದು ಜೀವನ ಸಾರ್ಥಕ ವಾದಂತೆ 2

ನೀ ಇದ್ದಾರೆ ಜೊತೆಯಲ್ಲಿ ಉಕ್ಕುತ್ತಿರುವ ಜಲಪಾತದಂತೆ ,
ಭೋರ್ಗರೆಯುತಿರು ಸದಾ ಪ್ರೀತಿಯೆಂಬ ಜೀವ ಜಲದಂತೆ,
ಸೂಸುತಿರುವೆ ಪ್ರೇಮದ ಮಧುರ ಅರಳಿದ ಹೂವಂತೆ
ಬೆಳಗುತಿರು ನಿರಂತರ ನನ್ನ ಜೀವನದಲಿ ಸೂರ್ಯನಂತೆ 3

ಹೀಗೆ ಎಂದೆಂದೂ ನನ್ನೊಟ್ಟಿಗೆ ನೀನಿರು ಹಾಲು ಜೀನಿನಂತೆ
ಕೈ ಹಿಡಿದು ನೆಡೆಸು ನನ್ನ ನೀ ಮುಗ್ಧ ಮಗುವಿನಂತೆ
ಸಾಗಬೇಕಿದೆ ನಾವಿಬ್ಬರು ಬಹು ದೂರ ವಿಮಾನದಂತೆ
ಜೀವನದ ತೇರನ್ನು ಎಳೆಯೋಣ ಬಾ ಕಂಡ ಕನಸಂತೆ !

ಗುರುವಾರ, ಸೆಪ್ಟೆಂಬರ್ 8, 2011

ಸಿಹಿ ಮುದ್ದು ಕಂದ

ಮಲಗು ಮಲಗೆನ್ನ ಸಿಹಿ ಮುದ್ದು ಕಂದ
ಆ ನಗುಮೊಗವ ನೋಟವು ಎಂಥ ಆನಂದ

ಕಾಲ ಹೆಬ್ಬೆಟ್ಟನು ಹಿಡಿದೆತ್ತಿ ಬಾಯೊಳಗೆ ಇಟ್ಟು
ಕಷ್ಟ ವಿಲ್ಲದೆ ಸವಿವ ಸವಿ ನಿನಗೆ ಎಷ್ಟು ಅಂದ
ಕೃಷ್ಣ ನೀ ಎಂಬಂತೆ ತೋರುತಿದೆ ಈ ರೂಪ
ಕ್ಷಣವೋ ತಪ್ಪಿಸಲಾರೆ ನೋಡುಲು ನಿನ್ನಾರವಿಂದ ೧

ಕಡಗೋಲು ಅಡಗೋಲು ಆಟಕೆ ಕೊಡುವೆನು
ಕಾಲ ಕಳೆಯದೆ ಮಲಗು ನೋಡು ಗುಮ್ಮ ಬಂದ
ಕಟ್ಟಿದ ತೊಟ್ಟಿಲು ತೂಗಿ ಕೈ ಸೋಲುತಿದೆ
ಕಾಟ ಕೊಡಡಿರೋ ಮಗುವೆ ನೀನಲ್ಲವೇ ಕಂದ 2

ಕೈ ಎರೆಡು ತೋರುತ ಕಾಲುಗಳು ಮೇಲೆತ್ತಿ
ಕಣ್ಣು ಹೊರಳಿಸಿ ಆಕಾಶ ನೋಡುವುದೇ ಚಂದ
ಕಣ್ಣುತಪ್ಪಿಸಿ ಮಲಗಿದಂತೆ ಮುಖ ಮಾಡಿ ಎದ್ದು
ಕೂರುವ ಈ ನಟನೆಯ ನೀ ಕಲಿತೆ ಯಾರಿಂದ 3