ಶನಿವಾರ, ನವೆಂಬರ್ 20, 2010

ಹೊಸದೊಂದು

ಹೊಸದೊಂದು ಬಾಳನ್ನ ಅರಸಿ
ಹೊರಟಿರುವೆವು ನಾವು.....
ಹಸಿರ ದಾರಿ ಕಾಣಿಸುತಿದೆ
ಬಂದು ಬಣ್ಣದ ಹೂಮಳೆ ಸುರಿಸಿ ನೀವು

ಆಸೆ ಕನಸುಗಳ ಹೋತ್ತು
ಕುದುರೆ ಏರಿ ಓಡುತಿರುವೆವು ನಾವು
ಜೇವನದ ಸೊಬಗ ಸವಿಯಲು
ಓಟಕ್ಕೆ ವಿಶ್ರಾಂತಿ ಕೋಡಿಸಿ ನೀವು

ಎಲ್ಲಾರೊಂದಿಗೆ ನಗುತ ಇಸ್ಟೂದಿನ
ಒಂಟಿಯಾಗಿ ಕಾಲ ಕಳೆದೆವು ನಾವು
ಒಡಗೂಡಿ ನಲಿದು ಜೊತೆಯಾಗಿ
ನೆಡೆಯಲು ದಾರಿತೋರಿಸಿ ನೀವು

ಸರಸ ವಿರಸ ಜವಬ್ದಾರಿ ಇಲ್ಲದೆ
ರಸಮಯವಾಗಿ ಕಾಲ ಕಳೆದೆವು ನಾವು
ಪ್ರೀತಿ ಪ್ರೇಮ ಮೋಹ ಮುನಿಸು
ಸೊಗಸುಗಳ ಅನುಭವ ಹಂಚಿ ನೀವು

ಮದುವೆ ಮುಹೂರ್ತದ ಸಮಯಕ್ಕೆ
ಸಂಭ್ರಮದಿಂದ ಕಾಯುತಿರುವೆವು ನಾವು
ಆ ಶುಭ ಸವಿಘಳಿಗೆಗೆ ಸಾಕ್ಷಿಯಾಗಿ
ಬಂದು ಹರಸಿ ತಾಂಬೂಲ ಸ್ವೀಕರಿಸಿ ನೀವು

2 ಕಾಮೆಂಟ್‌ಗಳು: