ಕಪ್ಪು ಕಾಡಿಗೆಯೆಳೆದ ಕಣ್ಣಿನು ನೋಡಬೇಕೆಂದೆ
ನೋಡಲಾರದೆ ಹೋದೆ
ಆ ತೀಡಿದಾ ಹುಬ್ಬನ್ನು ಮುಟ್ಟಬೇಕೆಂದೆ
ಮುಟ್ಟಲಾರದೆ ಹೋದೆ
ಮುಂಗುರುಳು ಸರಿಸಿ ಮಖವ ಕಾಣಬೇಕೆಂದೆ
ಕಾಣಲಾರದೆ ಹೋದೆ
ನಿನ್ನ ಜೊತೆ ಕುಳಿತು ಪಯಣಿಸಬೇಕೆಂದೆ
ಪಯಣಿಸಲಾರದೆ ಹೋದೆ
ಸನಿಹ ಬಂದು ಸುಗಂಧವ ಸವಿಯಬೇಕೆಂದೆ
ಸವಿಯಲಾರದೆ ಹೋದೆ
ಮೈಸೋಕಿ ನವಿರಾಗಿ ಕುಣಿಯಬೇಕೆಂದೆ
ಕುಣಿಯಲಾರದೆ ಹೋದೆ
ಮಾತನಾಡಿಸಿ ನಕ್ಕು ನಗಿಸಬೇಕೆಂದೆ
ನಗಿಸಲಾರದೆ ಹೋದೆ
ಮದುವೆಯಾಗುವೆಯಾ ಎಂದು ಕೇಳಬೇಕೆಂದೆ
ಕೇಳಲಾರದೆ ಹೋದೆ
ನೀ ಕೇಳಿದಾ ಬಟ್ಟೇ ಕೋಡಿಸಬೇಕೆಂದೆ
ಕೊಡಿಸಲಾರದೆ ಹೋದೆ
ನೀ ನೇಡೆದಾ ದಾರಿಯಲಿ ಹೋಗಬೇಕೆಂದೆ
ಹೋಗಲಾರದೆ ಹೋದೆ
ಒಮ್ಮೆ ತಿರುಗಿ ನೋಡುವಳೆಂದುಕೋಂಡೆ
ತಿರುಗಿ ಕಣ್ಣು ಮಿಟಿಕಿಸಿ ಮುಗುಳ್ನಕ್ಕು ಓಡಿಹೋದೆ?
ಪ್ರೇಮದ ಆರಂಭದ ದಿನಗಳನ್ನು ತುಂಬ ಚೆನ್ನಾಗಿ ವಿವರಿಸಿದ್ದಿರಿ. ಸುಂದರವಾಗಿದೆ
ಪ್ರತ್ಯುತ್ತರಅಳಿಸಿpratibheyanu thorutihe premayanadali
ಪ್ರತ್ಯುತ್ತರಅಳಿಸಿbhanjisuta kannada pada koshavane
janamanagalige preetiya sihiyootavunisuta
namma huduga kaliduthiya shubha vivahake
Congrats Prabhanjana :-)