ಸೋಮವಾರ, ಮಾರ್ಚ್ 29, 2010

ಅಕ್ಕ

ಅಕ್ಕ ನಿನ್ನ ಗಂಡ ಆಗೋರು ತುಂಬಾ ಕಪ್ಪು ಕಣೇ
ಪಕ್ಕದ ಮನೆಯ ಹುಡುಗನಿಗಿಂತ ಬೆಳ್ಳಗೆ ಇಲ್ಲವೇನೇ

ಕೆಕ್ಕರಿಸಿ ನಿನ್ನ ನೋಡೋ ನೋಟ ಸೊಟ್ಟ ಇಲ್ಲವೇನೇ
ಅಕ್ಕರೆಯಿಂದ ನೋಡೋವಾಗ ಕಾಣೋದು ಸೋಟ್ಟನೇ ಕಣೇ

ನಕ್ಕರೆ ಕಾಣೋ ಕೋರೆ ಹಲ್ಲು ಎಸ್ಟು ಅಂದಾನೇ
ದಂತ ವೈದ್ಯರ ಹತ್ರ ಹೊಗಿ ಸರಿ ಮಾಡಿಸ್ತೇನೆ

ಕೂಗಿ ಕರೆದರೂ ಕೇಳಿಸದಾಕಿವಿ ಸೂಕ್ಷ್ಮ ಅಲ್ವೇನೇ
ಕೆಟ್ಟ ವಿಷಯ ಕಿವಿಗೆ ಬೀಳದೇ ಇರೊದು ಒಳ್ಳೇದೇ ಕಣೇ

ಹರಕು ಮುರುಕು ಕೂದಲು ಅವನ ಬೈತಲು ನಾ ಕಾಣೇ
ತಲೆ ಸ್ನಾನ ಮಾಡ್ಸಿ ಬಾಚಿದರೆ ಸ್ಪುರದ್ರೂಪಿ ಆಗ್ತಾನೇ

ಸೊಕ್ಕು ತುಂಬಾ ಜಾಸ್ತಿ ಅವನು ಈಗಲೇ ತೋರಿಸ್ತಾನೆ
ರೊಕ್ಕ ಇರೋ ಹುಡುಗರಿಗೆ ಅದು ಸಹಜ ಅಲ್ಲವೇನೇ

ಸಿಕ್ಕ ಸಿಕ್ಕ ಹುಡಿಗಿಯರ ಹಿಂದೆ ಓಡಿ ಹೋಗ್ತಾನೇ
ಕೊಕ್ಕೆ ಹಾಕಿ ಹಿಡಿದು ತರಲು ಬೇಗ ಮದುವೆ ಅಗ್ತೀನೇ

ಚಿಕ್ಕ ಚಿಕ್ಕ ವಿಷಯಕ್ಕೆಲ್ಲಾ ತುಂಬಾ ತರಲೆ ಮಾಡ್ತಾನೇ
ಚೊಕ್ಕವಾಗಿ ಜೀವನ ನೆಡೆಸೊರು ಸ್ವಲ್ಪ ಹಗೇನೇ ಕಣೇ

ಕೋಪ ಮಡ್ಕೊಂಡು ಕೂಡೋ ನಿನ್ನ ಹೇಗೇ ಸಾಕ್ತಾನೇ
ಸಕ್ಕರೆಯಂತೆ ಮುದ್ದಿಸಿ ನನ್ನ ಕರಗಿಸಿ ಬಿಡುವನೇ

ಅಕ್ಕ ಏನೇ ಹೇಳು ಅವನು ನಿನಗೆ ಸರಿ ಹೊಂದೋದಿಲ್ಲವೇ
ಪಕ್ಕ ಅವನ್ನೇ ಮದುವೆ ಅಗಿ ನಾನು ಸುಖವಾಗಿ ಇರ್ತ್ತೇನೇ

ಅಕ್ಕ ನನ್ನ ಅವನ ಜೋಡಿ ಚನ್ನಾಗಿ ಇರೋದಿಲ್ವೇನೆ
ಬಚ್ಚಿಟ್ಟ ನಿನ್ನ ಮನಸಿನ ಆಸೆ ಮುಂಚೆನೆ ಗೊತ್ಹಿತ್ತು ಕಣೆ!

ಮಂಗಳವಾರ, ಮಾರ್ಚ್ 9, 2010

ಅಮೇರಿಕಾದ ತುಂಬಾ

ಹೊಗಳಲು ಬರೋದಿಲ್ಲ
ಜನ ಹೊಗಳದೆ ಇರೋದಿಲ್ಲ
ಅದರ ತುಸು ವರ್ಣನೆ ಈ ಕವನ ತುಂಬಾ

ಬೈಕುಗಳ ಸುಳಿಯೋದಿಲ್ಲ

ಬಸ್ಸು ರೈಲು ಬರೋದು ತಡ ಆಗೋಲ್ಲ

ಕಾರುಗಳದೆ ದರಬಾರು ರಸ್ತೆ ತುಂಬಾ

ಮಿಂಚು ಅತಿಯಾಗಿ ಮೂಡುವುದಿಲ್ಲ

ಅಂಚಿನಲ್ಲಿ ಗುಡುಗು ಸಿಡಿಲಿನ ಭಯವಿಲ್ಲ

ಸಿಂಚನ ದಂತೆ ಮಳೆ ಇಲ್ಲಿ ಭುವಿಯ ತುಂಬಾ

ಹೊಗೆ ಧೂಳು ಹರಡುವುದಿಲ್ಲ

ಹೆಚ್ಹು ಪ್ರಖರ ಬಿಸಿಲು ಬೀಳೋದಿಲ್ಲ

ಹಚ್ಹ ಹಸಿರು ಚಾಚಿದೆ ಊರ ತುಂಬಾ

ಇಡ್ಲಿ ದೋಸೆ ತಿನ್ನೋದಿಲ್ಲ

ಬ್ರೆಡ್ ಬೆಣ್ಣೆ ಜಾಮು ಬಿಡೋದಿಲ್ಲ

ಕೊಬ್ಬಿರದ ಹಾಲು ಹಣ್ಣುಗಳೇ ತಿಂಡಿ ತುಂಬಾ

ನೀರು ಜಾಸ್ತಿ ಕುಡಿಯೋದಿಲ್ಲ

ನೀರೆಯರು ಮೊಸರು ತಿನ್ನುವರಲ್ಲ

ಇಳಿಸುವರು ಅಲ್ಕೋಹಾಲು ಬಾಯಿ ತುಂಬಾ
ಬಟ್ಟೆ ಬೆಚ್ಹಗೆ ಹಾಕುವರಲ್ಲ
ಬೊಜ್ಜು ಕರಗಿಸಲು ಓಡುವರಲ್ಲ
ಬಿಸಿಲಿಗೆ ಮೈಯನ್ನು ಒಡ್ಡುವರು ಬೀಚು ತುಂಬಾ

ಮುಚ್ಚು ಮರೆ ಎಂಬೋದು ಇಲ್ಲ

ತುಚ್ಚವಾಗಿ ಯಾರನ್ನು ಕಾಣೋದಿಲ್ಲ

ಸ್ವೇಚ್ಛ ಪ್ರೀತಿ ತುಂಬಿದೆ ಎಲ್ಲರ ಮನದ ತುಂಬಾ

ಸಂಸಾರಕೆ ಬೇಗ ಬೀಳೊರಲ್ಲ

ಸರಸಕೆ ಜಾಗ ಇಂಥದ್ದೇ ಬೇಕಾಗಿಲ್ಲ

ಸಮಯವೇ ಅತಿಮುಖ್ಯ ಇವರಿಗೆ ಜೀವನ ತುಂಬಾ
ಭಾವನೆಗಳಿಗೆ ಬೆಲೆ ಇಲ್ಲ
ಬವಣೆಗಳಿಗೆ ಹೆದರೋದಿಲ್ಲ
ಬದುಕು ಸಾಗಿಸುವರು ಹೀಗೆ ಅಮೇರಿಕಾದ ತುಂಬಾ

ಗುರುವಾರ, ಮಾರ್ಚ್ 4, 2010

ಅಮೆರಿಕಾದ ಹುಡುಗಿ

ಅಮೆರಿಕಾದ ಹುಡುಗಿ
ನೋಡಲು ಎಂಥ ಬೆಡಗಿ

ಕೊಂಪು ಮೊರೆ ಮುಖವ ಹೊತ್ತು
ತೀಡುತಾಳೆ ಹುಬ್ಬು ಕಪ್ಪು
ಹಾರುವುದು ಕುದುರೆ ಜುಟ್ಟು
ಹಾಕುವಳು ಕನ್ನಡಕ ಕಪ್ಪು

ತುಂಡು ಬಟ್ಟೆ ನಾಚುತ ನಿಂತು
ಉನಬಡಿಸುವಳು ಕಣ್ಣು ತಂಪು
ಬೆಕ್ಕು ಹೆಜ್ಜೆ ಇಡುತ ನೆಡೆದು
ಬಳುಕುತಿದೆ ನಡು ಸಣ್ಣಗೆ ಸೆಳೆದು

ಕಂಠ ಪೂರ್ತಿ ಕುಡಿದರು ಅವಳು
ತೂರಾಡದೆ ಹಾಗೆ ನಿಲ್ಲುವಳು
ಚಿಕ್ಕ ಚೀಲ ಹೆಗಲಲಿ ಹಿಡಿದು
ಮೆತ್ತಗೆ ನೆಡೆವಳು ತಾಳಕ್ಕೆ ಕುಣಿದು

ನೋಟದಲ್ಲಿ ಮನಸ ಕೊಟ್ಟು
ಪ್ರೀತಿಯನ್ನು ಹರಿಯಲು ಬಿಟ್ಟು
ತಬ್ಬಿ, ಉಸುರುವಳು ಕಿವಿಯಲಿ ಗುಟ್ಟು
ಮುದ್ದು ಮಾಡುವಳು ತುಟಿಗೆ ತುಟಿಯನು ಇಟ್ಟು