ಇಬ್ಬನಿ ತುಂಬಿದ ಬೆಟ್ಟದಲಿ
ಮೊಬ್ಬು ಬೆಳಕಿನ ಆ ಸಮಯದಲಿ
ತಬ್ಬಿಕೊಂಡು ಮೋಡಗಳ ಆಕಾಶದಲಿ
ಉಬ್ಬಿ ಉದಯಿಸಿದೆ ನೀ ಪೂರ್ವದಲಿ
ತುಂಬಿ ತುಳುಕಿದ ಆ ಹಾಲ್ಗಡಲಲ್ಲಿ
ಚಂದದಿ ಬೀಸುವ ಮಧುರ ತಂಗಾಳಿಯಲಿ
ಅಂಬುಜ ಬಳಕುತ ನಾಚುತ ಇಣುಕುತಲಿ
ಹೊಂಬಣ್ಣವ ಬೀರುತ ಬಂದ ಈ ಭುವಿಯಲ್ಲಿ
ಕಣ್ಣ ಮುಚ್ಚಾಲೆ ಮೋಡದಲ್ಲಿ ಆಡುತಲಿ
ಸಣ್ಣ ಬೆಳಕಿನ ಕಿರಣವ ಹರಡುತಲಿ
ಬಣ್ಣ ಬಣ್ಣವ ತುಂಬುತ ಆಗಸದಲ್ಲಿ
ಸ್ವರ್ಗವನ್ನೇ ಸೃಷ್ಟಿಸಿದೆ ಈ ಧರೆಯಲ್ಲಿ
ಸ್ಕಂದ ಗಿರಿಯ ಹಸಿರ ತಪ್ಪಲಲ್ಲಿ
ಮಂಜು ಆವರಿಸಿದ ಮುಂಜಾವಿನಲಿ
ಬಂದ ಜನರನು ಕೈಬೀಸಿ ಕರಿಯುತಲಿ
ಹೊಸ ದಿಗಂತವ ತೋರುತ ಹರುಷದಲಿ
ತುಂಬಿದೇ ಉತ್ಸಾಹ ನಮ್ಮ ಮನಸಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ