ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ
ಮೆಲ್ಲ ಮೆಲ್ಲನೆ ಬಂದು ಗಲ್ಲವ ಸವರುತ
ಮುತ್ತನ್ನೇ ಸುರಿಸಿ ನನ್ನ ಕನಸನ್ನು ತುಂಬುತ ...... ಪ
ಅಂದದ ಮೊಗವನ್ನು ಇಂದು ನೀ ತೋರುತ
ಮಂದಗಮನೆ ನೀನು ನಗುವನ್ನು ಬೀರುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೧
ಬಳ್ಳಿಯಂತೆ ಬಳುಕುತ ಚಂದದಿ ನಲಿಯುತ
ಮರವನ್ನು ಏರಿದಂತೆ ನನ್ನ ನೀ ಬಳಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೨
ಮೋಹದ ಪಾಶಕ್ಕೆ ಸಿಲುಕಿ ನೀ ಕುಣಿದಾಡುತ
ಪ್ರೀತಿ ಮಳೆ ಸುರಿಸಿ ನನ್ನನು ಅನುಸಿರಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೩
ಹಸಿರಲ್ಲಿ ಹಸಿರಾಗಿ ಉಸಿರಲ್ಲಿ ಉಸಿರಾಗಿ
ಕನಸಲ್ಲೂ ನನಸಲ್ಲು ನನ್ನ ಹೃದಯ ಆವರಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೪
ಚಂದುಳ್ಳಿ ಚಲುವೆ ನಿನ್ನ ಸನಿಹವ ಬಯಸುತ
ಹಾರಿ ಬರುವ ನನ್ನ ಸಂತೋಷ ಪಡಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೫
Too good and also very nice scripting :)
ಪ್ರತ್ಯುತ್ತರಅಳಿಸಿAll the best prabhanjana..