ಗುರುವಾರ, ಅಕ್ಟೋಬರ್ 22, 2009

ಹಾರುವ ಹಕ್ಕಿಗಳು

ಹಾರುತಿವೆ ಹೊಸ ಹಕ್ಕಿಗಳಿಂದು
ತಿಳಿಯ ನೀಲಿ ಆಗಸಕ್ಕಿಂದು
ಮಂಜು ಮೋಡ ದಾಟಿ ದೂರ
ಹೊಸ ಲೋಕ ಹುಡುಕುವೆ ವೆಂದು

ಎಲ್ಲೊ ಹುಟ್ಟಿ ಎಲ್ಲೊ ಬೆಳೆದು
ಗೂಡು ಬಿಟ್ಟು ಅಲಿಯುತ ದಿನವು
ಸುಮಧುರ ಕನಸನ್ನು ನೆನೆದು
ಹಾರುವುದು ಹೊಸ ಗೆಳೆತನ ಬೆಸೆದು

ಆಸೆ ತುಂಬಿದ ಕಣ್ಣುಗಳಲ್ಲಿ
ತೇಲುತ ಸವಿ ತಂಗಾಳಿಯಲ್ಲಿ
ಸುಂದರ ಸರಸಮಯ ಸವಿಯಲ್ಲಿ
ಹಾರುವವು ಭಾವನ ದಿಗಂತದಲ್ಲಿ

ಹದ್ದು ಗಿಡುಗದ ಭಯವನೆ ತೊರೆದು
ಬಿಸಿಲು ಚಳಿ ಮಳೆಯನ್ನೇ ಅಳಿದು
ಕಂಡ ಕನಸು ನನಸಾಗಿಸಲು
ಹಾರುವವು ಜೀವನ ಮಧುರವಾಗಿಸಲು

ಕಸ ಕಡ್ಡಿ ಹೆಕ್ಕಿ ತೆಗೆದು ಜೋಡಿಸಿ
ಕಟ್ಟುವವು ಹೊಸ ಗೂಡೊಂದು
ಕಾವು ಕೊಟ್ಟು ಮರಿಯನು ಮಾಡಿ
ಹಾರುವವು ಕಾಳು ಹುಡುಕಲೆಂದು

ಮುತ್ಸಂಜೆಗೆ ಮೊದಲು ಗೂಡಿಗೆ ಮರಳಿ
ತಂದ ಕಾಳು ಮರಿಗಳಿಗೆ ಉಣಬಡಿಸಿ
ಮುಂಜಾವಿಗೆ ಚಿಲಿಪಿಲಿ ಗುಟ್ಟುತ, ಮರಳಿ
ಹಾರುವವು ಜೀವನದ ಪಾಠವ ತಿಳಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ