ಹೋಗು ನೀ ಇಪ್ಪತ್ತು
ಮತ್ತೆಂದೂ ಬಾರದಂತೆ
ನಿನ್ನ ಮುಖ ಯಾರಿಗೂ
ಮುಂದೆಂದೂ ತೋರದಂತೆ ಪ
ಕರೋನ ಸೃಷ್ಟಿಸಿ ನೀನು
ಘೋರ ತಪ್ಪನು ಎಸಗಿದಂತೆ
ಮರುಕಳಿಸದಿರು ಯಾವತ್ತೂ
ಜನರ ಜೀವಹಿಂಡಿದ ಪಾಪಿ ನೀನಂತೆ ೧
ಹಳೆಯ ಮಳೆಸೇರಿಸಿ ಸುರಿದು
ಇಳೆಯು ಕಳೆದುಹೋಗುವಂತೆ
ತೊಳೆದು ಬಿಟ್ಟೆಯಲ್ಲ ನೀ
ಬೆಳೆಯ ಕಳೆಯೂ ಉಳಿಯದಂತೆ ೨
ಬಾ ನವ ವರುಷವೇ ಬಾ
ಹೊಸ ಅಸೆ ಚಿಗುರಿಸುವ ನಿಶೆಯಲ್ಲಿ
ಹೊಸ ಕನಸಿನ ಬೀಜ ಬಿತ್ತುತಲಿ
ಹಸಿರಾಗಿಸು ಅಮೃತವ ಸುರಿಸುತಲಿ. ೩
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ