ಶುಕ್ರವಾರ, ಸೆಪ್ಟೆಂಬರ್ 11, 2020
**ಪಯಣದೊಳಗೋ**
ಲಾಲಿ ಹಾಡು
ಜೋ ಜೋ .. ಜೋ ಜೋ ಜೋ
ಕಣ್ಣು ಬಿಟ್ಟು ನೋಡದಿರು
ಮತ್ತೆ ಎದ್ದು ಕೂರದಿರು
ಮುದ್ದಾಗಿ ನಗುತ ಮಲಗು ನನ್ನ ಮಗುವೇ
ಇರಿಳು ಸರಿದ ರಾತ್ರಿಯಲಿ
ಅರ್ಧಚಂದ್ರ ನಗುತಿಹನು
ಕಣ್ಣುಮುಚ್ಚಾಲೆ ಆಡುತಿರುವ
ಬಾನಿನಲ್ಲಿ ನಿನ್ನ ಕಣ್ಗಳಂತೆ
ನೋಡುವೆ ಏನು ಕಿಟಿಕಿಯಲ್ಲಿ
ನಗು ಜಾರಿದ ಆ ತುಟಿಗಳಲ್ಲಿ
ಕನವರಿಸಿ ಏಳುವೆ ಏಕೋ
ಆತಂಕ ಕಂಗಳಲ್ಲಿ
ಚಂದಿರನ ಕರೆಸುವೆನು
ತಂಗಾಳಿ ಜೊತೆ ಬಂದು
ಮಲಗಿದ ಮಂಚ ತೂಗಿ
ದುಗುಡ ಓಡಿಸುವ ಅರೆಕ್ಷಣದಲ್ಲಿ
ಚಂದ್ರ ಲೋಕಕೆಕರೆದೊಯ್ದು
ಉಯ್ಯಾಲೆ ಆಡಿಸುವನು
ತಾರೆಗಳಿಂದ ಲಾಲಿ ಹಾಡಿಸುವ
ಮಲಗು ಮುದ್ದು ಮಗುವೇ
ಉಸಿರೂ ಕಣೆ. .
ಊದಿದೆ
ಪ್ರೀತಿಯಲ್ಲಿ ಕೆನ್ನೆ ಊದಿದೆ
ಊದಿದೆ
ಕೆನ್ನೆ ಮೇಲೆ ತುಟಿಯು
ಮೂಡಿದೆ.
ನೋಡು ನಿನ್ನ ನನ್ನ ಕಣ್ಣಾ ಒಳಗೆ
ನಿಜವೂ ನಿನಗೂನು ತಿಳಿಯುತ್ತದೆ
ಕಿವಿಯಲ್ಲಿ ಬಂದು ನಿಜವ ಹೇಳುವೇ
ಹೇಳಲೇ
ಕನಸಿನಲ್ಲೂ ನೀನೆ ಕಾಣುವೆ
ನಿನ್ನಾಣೆಗು ಬೇರೆ ಹುಡುಗಿ ಜೊತೆ ಎಂದು ಓಡಾಡಿಲ್ಲ
ನಿನ್ನಾಮೇಲೆ ಪ್ರೀತಿಕಿಚ್ಚು ಹುಚ್ಚಾಗಿ ಮಿತಿ ಮೀರಿದೆ
ಕೈಯಲಿ ಕೈ ಇಟ್ಟು ವಾದಮಾಡಲೇ ನನಗಾಗಿ ನೀನು ಹುಟ್ಟಿರುವೆ
ಹಿಂದಿನ ಜನ್ಮದ ರಹಸ್ಯ ತಿಳಿಸಲೇ ನಿನಗಾಗಿ ನಾ ಸತ್ತಿರುವೇ
ಮತ್ತೆ ಸಾಯಲೇ
ಅದೇ ಪ್ರೀತಿ ಇಂದು ಕಾಡಿದೆ
ಕಾಡಿದೆ
ಕನಸಿನಲ್ಲೂ ನೀನೆ ಕಾಣುವೆ
ನಿನ್ನಪ್ಪನ ಅಡ್ಡಿ ಇದೆಯಾ, ನನ್ನ ಪ್ರೀತಿಮಾಡಲೂ
ನಿನ್ನಮ್ಮನಾ ಮದುವೇಗೊಪ್ಪಿಸುವೆ, ನಾ ಬೇಗ ಹಾಳಾಗಲು
ಕತ್ತಲಿ ತಾಳಿಯೊಂದು ಬೇಕಾಗಿದೆ, ಕಟ್ಟಿ ಇಡುವೆ ಸಿಂಧೂರಾ
ಮಧುಚಂದ್ರಕೆ ಹೋಗಬೇಕಾಗಿದೆ, ಇದೆಯಾ ನಿನ್ನ ಸಹಕಾರ
ಅರಳಿದೆ
ಆಸೆಯಲ್ಲಿ ಕೆನ್ನೆ ಮಿಂಚಿದೆ
ಹೇಳದೇ
ಕೆನ್ನೆ ಮೇಲೆ ತುಂಟ ಕಿರುನಗೆ
ನೋಡಿದೆ ನಾ ನಿನ್ನ ಕಣ್ಣಾ ಒಳಗೆ
ಮೋಹದ ಕಾಂತಿ ನಲಿದಾಡಿದೆ
ತುಟಿಯಲಿ ತುಟಿಯಿಟ್ಟು ಒಂದು ಹೇಳಲೇ
ಹೇಳಲೇ
ನೀನೆ ನನ್ನ ಉಸಿರೂ ಕಣೆ. .