ಹಸಿರಿನ ಮರಗಳ ನಡುವಲಿ ಓಡಿವೆ
ಪುಟ್ಟ ಪುಟ್ಟ ಎರೆಡು ಸೈಕಲುಗಳು
ರಸಿಕರ ಕೈಬೀಸಿ ಕರೆದಿವೆ ರೈಲಲ್ಲಿ
ತುಸು ಬಾಗಿದ ಎರೆಡು ಹಳಿಗಳು
ಮುಂಜಾವಿನ ಸವಿಯನು ಸವಿಯಲು
ತಂಗಾಳಿಯಲಿ ಹೊರಟಿವೆ ಆ ಹುಡುಗರು
ರೈಲಲ್ಲಿ ಕನಸಿನ ಲೋಕ ಮುಟ್ಟಲು
ಮಧುಚಂದ್ರಕೆ ಹೊರಟಿವೆ ಹೊಸ ಜೋಡಿಗಳು
ಸೈಕಲ್ಲು ರಸ್ತೆ ಮೇಲೆ ಮೆಲ್ಲಗೆ
ಹೊಸತೇನೋ ಹುಡುಕುತ ಸಾಗಿದೆ
ರೈಲು ಹಳಿ ಮೇಲೆ ಬರಬೇಕಾಗಿದೆ
ರಸಿಕರಿಂದ ಅದು ತುಂಬಿ ತುಳುಕಿದೆ
ಸೈಕಲ್ಲು ಹುಡುಗರು ಆಗಲೇ ಬಂದಿವೆ
ರೈಲು ಇಂದು ತುಂಬಾ ತಡ ಮಾಡಿದೆ
ಬರುವವರೆಲ್ಲರ ಒತ್ತಾಸೆ ಒಂದೇ ಆಗಿದೆ
ತುಂತುರು ಸೋನೆ ಮಳೆ ಬರಬಾರದೇ?
--ಮಳೆಯಲ್ಲಿ ಮಿಂದು ಬೆವರನು
ಒರೆಸಿ, ಆನಂದ ಪಡಲಾಗದೆ
ಆ ಹಸಿರು ಚಿಗುರು ಮಧ್ಯ ಕಂಪಿದೆ
ವಯೋ ಧರ್ಮ ವ ಅರಿಯಲು
ರೈಲು, ರಸ್ತೆ, ಮಧ್ಯ ತಂತಿ ಬೇಲಿ ಇದೆ
ಈ ಮರ್ಮವಾ ತಿಳಿಸಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ