ತುಂಟ ಮನಸಿನ ಹುಚ್ಚು ಕನಸುಗಳು
ಗುರುವಾರ, ಏಪ್ರಿಲ್ 27, 2017
ಕಡಿದಾಯ್ತು
ಕಾಡು ಕಡಿದಾಯ್ತು
ನಾಡು ಬೆಳೆದಾಯ್ತು
ಗೂಡು ಇಲ್ಲದೆ ಬದುಕಬೇಕೇ ನಾವು
ಬೇಡಿ ತಿನ್ನಬೇಕಾಯ್ತು
ತಡಿ ತಡಿ ಸ್ವಲ್ಪ ಹೊತ್ತು
ಕೂಡಿ ಒಟ್ಟಿಗೆ ತಿನ್ನುವ ನಾವು
ಒಡಲ ನೀರು ಬರಿದಾಯ್ತು
ತಡಿ ಮಾಲಿನ್ಯ ಇವತ್ತು, ಇಲ್ಲವೇ
ಪಡಿತರಚೀಟಿ, ಗಾಳಿಗೂ ಬೇಕಾಗಬಹುದು !!
ಯಾವ ಹಾಡು
ಯಾವ ಹಾಡು ಹಾಡಲಿಲ್ಲಿ
ಹಸಿರ ತಾಯಿ ಮಡಿಲಲಿ .. ಪ
ಹೊಸತು ಏನೋ ಕನಸು ಕಾಣೋ
ಮನಸು ಮೂಡಿದ ಕ್ಷಣದಲಿ -- ಅ ಪ
ಹಸಿರ ಹಾಸಿನ ಬೆಟ್ಟಸಾಲು ಗಗನ ಚುಂಬಿಸುವಂತಿದೆ
ಹರಿವ ತೊರೆಯು ಸರಸ ಸ್ವರ ಸಂಗೀತ ಹಾಡಿದಂತಿದೆ
ಮೋಡಸೀಳಿ ಸೂರ್ಯ ರಶ್ಮಿ, ಭುವಿಯ ಮುತ್ತಿಕ್ಕಿದಂತಿದೆ
ಹೊಸತು ಭಾವ ಬೆರೆತು ಜೀವ ರಸಿಕರಾಗುವಂತಿದೆ
ಕಾಡು, ನಾಡ ಜನರ ಸೆಳೆದು ಪ್ರೀತಿ ರಸವ ಚಲ್ಲಿದೆ,
ಹಸಿರ ಸೊಗಸು ಕಣ್ಣಿತುಂಬಿ , ಬಾಹು ತಾನೇ ತೆರೆದಿವೆ!
ತಂಪು ಗಾಳಿ ದೇಹ ಸೋಕಿ ಮನದ ಮೊಗ್ಗು ಅರಳಿದೆ
ಬಣ್ಣ ಬಿಲ್ಲು ಮಿಂಚಿನೊಂದಿಗೆ ಬೆಳಕ ತೋರಣ ಕಟ್ಟಿವೆ
ಆಕಾಶದೆತ್ತರಕ್ಕೆ ಹಾರಿ ಮೋಡ ಹಿಡಿಯುವಂತಾಗಿದೆ
ಭಾವ ತುಂಬಿದ ಹಾಡು ಹಾಡಿ ನಿನ್ನ ಮಡಿಲ ಸೇರಬೇಕಿದೆ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)