ಹುಟ್ಟಿದೊಡೆ ಪುಟ್ಟ ಮಗುವಾದೆ
ಉಳಿದ ಮಕ್ಕಳಿಗೆ ಅಕ್ಕ ತಂಗಿಯಾದೆ
ಬೆಳೆದೊಡೆ ಒಲವ ಗೆಳತಿಯಾದೆ
ಗಂಡನಿಗೆ ಪ್ರೀತಿಯ ಮಡದಿಯಾದೆ
ಮನೆಬೆಳಗುವ ಮುದ್ದಿನ ಸೊಸೆಯಾದೆ
ಕಂದಮ್ಮಗಳಿಗೆ ಮಮತೆಯ ತಾಯಿಯಾದೆ
ಮನೆಗೆ ಅಕ್ಕರೆಯ ಮುದ್ದಿನ ಮಗಳಾದೆ
ಹೆಣ್ಣು ಮನೆ ನೆಡೆಸುವಳು
ಉಪಯೋಗಿಸಿ ಬಲು ಯುಕ್ತಿ
ಹೆಣ್ಣು ಅಂದ್ರೆ ಅದು ಬರೀ ಹೆಣ್ಣಲ್ಲ
ಅದು ಒಂದು ಅದ್ಭುತ ಶಕ್ತಿ